ನ್ಯೂಯಾರ್ಕ್: ಮಿಸ್ ಯೂನಿವರ್ಸ್ ಪ್ರಶಸ್ತಿಗಾಗಿ ಅಮೆರಿಕದ ನ್ಯೂ ಓರ್ಲಿಯನ್ಸ್‌ನಲ್ಲಿ ನಡೆದ ಸ್ಪರ್ಧೆಯಲ್ಲಿ, 86 ಸ್ಪರ್ಧಿಗಳ ಪೈಕಿ ಅಮೆರಿಕದ ಬೊನಿ ಗೇಬ್ರಿಯಲ್ ಗೆಲುವು ಸಾಧಿಸಿದರು. ಕಳೆದ ವರ್ಷದ ಮಿಸ್ ಯೂನಿವರ್ಸ್ ಹರ್ನಾಜ್ ಸಂಧು ಕಿರೀಟವನ್ನು ತೊಡಿಸಲು ಹೋದಾಗ ಎಡವಿ ಬಿದ್ದ ವಿಡಿಯೋ ವೈರಲ್ ಆಗಿದೆ.
ಹಾಗೆಯೇ ಸುಧಾರಿಸಿಕೊಂಡು ನಡೆದ ಹರ್ನಾಜ್ ತಾವು ಮಿಸ್ ಯೂನಿವರ್ಸ್ ಆದ ದಿನಗಳನ್ನು ನೆನೆದು ಭಾವುಕರಾಗಿ ಕಣ್ಣೀರು ಹಾಕಿದರು.
ವೈರಲ್ ವಿಡಿಯೋದಲ್ಲಿ, ಸಂಧು, ಕಪ್ಪು ಬಟ್ಟೆ ಧರಿಸಿ, ಎಲ್ಲರನ್ನೂ ಗಾಳಿಯಲ್ಲಿ ಚುಂಬಿಸುತ್ತಾ ಕಣ್ಣೀರು ತಡೆದುಕೊಳ್ಳುವುದನ್ನು ನಾವು ನೋಡಬಹುದು.
“ನಾನು ಮೊದಲು ವೇದಿಕೆಯನ್ನು ಏರಿದಾಗ ನನಗೆ 17 ವರ್ಷ ವಯಸ್ಸಾಗಿತ್ತು ಮತ್ತು ಅಂದಿನಿಂದ ವಿಶ್ವ ಸುಂದರಿ ಆಗುವುದು ನನ್ನ ಗುರಿಯಾಗಿತ್ತು” ಎಂದು 22 ವರ್ಷದ ಹರ್ನಾಜ್ ಹೇಳಿದರು.
Hold back tears as @HarnaazKaur takes the stage one last time as Miss Universe! #MISSUNIVERSE pic.twitter.com/L0PrH0rzYw
— Miss Universe (@MissUniverse) January 15, 2023