ಪೂರ್ವದ ಸಂಗೀತ ಪಶ್ಚಿಮವನ್ನು ಸೇರಿದಾಗ……ಅದ್ಭುತ ವಿಡಿಯೋ ವೈರಲ್​

ಆರ್.​ಪಿ.ಜಿ. ಗ್ರೂಪ್‌ನ ಅಧ್ಯಕ್ಷ ಹರ್ಷ್ ಗೋಯೆಂಕಾ ಅವರು ಟ್ವಿಟರ್‌ನಲ್ಲಿ ಆಸಕ್ತಿದಾಯಕ ಪೋಸ್ಟ್‌ಗಳನ್ನು ಹಂಚಿಕೊಳ್ಳಲು ಹೆಸರುವಾಸಿಯಾಗಿದ್ದಾರೆ. ಹಾಸ್ಯದಿಂದ ಹಿಡಿದು ನವೀನ ತಂತ್ರಜ್ಞಾನಗಳವರೆಗೆ, ಅವರ ಪೋಸ್ಟ್‌ಗಳು ದೇಸಿ ಬಳಕೆದಾರರನ್ನು ರಂಜಿಸುತ್ತಲೇ ಇರುತ್ತವೆ.

ಈಗ, ಗೋಯೆಂಕಾ ಅವರು ತಮ್ಮ ನೆಚ್ಚಿನ ಸೂಫಿ ಗೀತೆಯ ನಿರೂಪಣೆಯನ್ನು ಹಂಚಿಕೊಂಡಿದ್ದಾರೆ. ಸ್ಕಾಟಿಷ್ ಚೇಂಬರ್ ಆರ್ಕೆಸ್ಟ್ರಾದಲ್ಲಿ ಮಸ್ತ್ ಖಲಂದರ್ ಮಸ್ತ್​ ಮಸ್ತ್​ ಹಾಡು ಹಾಡುವುದನ್ನು ಇದರಲ್ಲಿ ನೋಡಬಹುದು. ಟ್ವೀಟ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡ ಅವರು, ನನ್ನ ನೆಚ್ಚಿನ ಸೂಫಿ ಗೀತೆ ಮೋಡಿ ಮಾಡಿದೆ. ಬಾಲಿವುಡ್​ ಹಾಡನ್ನು ಸೂಫಿ ಗೀತೆಯಲ್ಲಿ ಹಾಡಿರುವ ಅದ್ಭುತ ಇದು ಎಂದು ಅವರು ಹೇಳಿದ್ದಾರೆ.

ವೀಡಿಯೋವು ತಬಲಾಗಳು ಮತ್ತು ಹಾರ್ಮೋನಿಯಂಗಳ ಮೇಲೆ ಕೇಂದ್ರೀಕರಿಸುವುದರೊಂದಿಗೆ ಪ್ರಾರಂಭವಾಗುತ್ತದೆ, ನಂತರ ಆರ್ಕೆಸ್ಟ್ರಾದ ಪ್ರಮುಖರಾದ ಕ್ಲಾರ್ಕ್ ರುಂಡೆಲ್ ಮತ್ತು ಪ್ರಮುಖ ಗಾಯಕ ಅಬಿ ಸಂಪಾ ಅವರು ಹಾಡಲು ಪ್ರಾರಂಭಿಸುತ್ತಾರೆ.

ಪಿಟೀಲು, ವಯೋಲಿನ್ ಮತ್ತು ಸೆಲ್ಲೋ ಪ್ಲೇಯರ್‌ಗಳಿಂದ ತುಂಬಿರುವ ಸಂಪೂರ್ಣ ಸ್ಕಾಟಿಷ್ ಚೇಂಬರ್ ಆರ್ಕೆಸ್ಟ್ರಾ ಹಿನ್ನೆಲೆಯಲ್ಲಿ ಗೋಚರಿಸುತ್ತದೆ. ಆದರೆ ಅವರು ಹಾಡಿರುವುದು ಮಸ್ತ್​ ಖಲಂದರ್​ ಹಾಡು. ಸಾಂಪ್ರದಾಯಿಕ ಕವ್ವಾಲಿ ಚಪ್ಪಾಳೆಗಳು ಬೀಟ್‌ಗಳನ್ನು ಸೇರಿಸುತ್ತವೆ. ಪೂರ್ವವು ಪಶ್ಚಿಮವನ್ನು ಸೇರಿದಾಗ ಈ ರೀತಿ ಸುಂದರ ಗೀತೆ ಮೊಳಗಲು ಸಾಧ್ಯ ಎಂದು ಹಲವರು ಕಮೆಂಟ್​ ಮಾಡಿದ್ದಾರೆ.

https://twitter.com/hvgoenka/status/1634199752958164993?ref_src=twsrc%5Etfw%7Ctwcamp%5Etweetembed%7Ctwterm%5E1634199752958164993%7Ctwgr%5E9834c25a55b7b0e9d035542febb195f3835b3108%7Ctwcon%5Es1_&ref_url=https%3A%2F%2Fwww.news18.com%2Fbuzz%2Fwatch-east-meets-west-in-this-soulful-dam-mast-qalandar-rendition-7281199.html

https://twitter.com/TaraChakravorty/status/1634236579483926539?ref_src=twsrc%5Etfw%7Ctwcamp%5Etweetembed%7Ctwterm%5E1634236579483926539%7Ctwgr%5E9834c25a55b7b0e9d035542febb195f3835b3108%7Ctwcon%5Es1_&ref_url=https%3A%2F%2Fwww.news18.com%2Fbuzz%2Fwatch-east-meets-west-in-this-soulful-dam-mast-qalandar-rendition-7281199.html

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read