‘ಮೋದಕ’ ತಿನ್ನುವ ಮುನ್ನ ಗಣೇಶನ ಅಪ್ಪಣೆ ಕೇಳಿದ ಶ್ವಾನ : ಮುದ್ದಾದ ವಿಡಿಯೋ ವೈರಲ್​

ದೇಶದ ಜನತೆ ಸದ್ಯ ಗಣೇಶ ಚತುರ್ಥಿಯ ಸಂಭ್ರಮದಿಂದ ಹೊರಬಂದಿಲ್ಲ. ಅನೇಕ ಮನೆಗಳಲ್ಲಿ ಗಣಪತಿ ವಿಸರ್ಜನೆ ಕಾರ್ಯ ಪೂರ್ಣಗೊಂಡಿದ್ದರೆ ಇನ್ನೂ ಕೆಲವು ಮನೆಗಳಲ್ಲಿ ಇಂದಿಗೂ ಗಣಪತಿ ಇದ್ದಾನೆ.

ಸೋಶಿಯಲ್​ ಮೀಡಿಯಾದಲ್ಲಿ ಗಣೇಶ ಚತುರ್ಥಿ ಸಂಬಂಧ ಅನೇಕ ವಿಡಿಯೋಗಳು ವೈರಲ್​ ಆಗ್ತಿವೆ. ಈ ಸಾಲಿಗೆ ಇನ್ನೊಂದು ವಿಡಿಯೋ ಸೇರಿದ್ದು ಮುದ್ದಾದ ಶ್ವಾನವೊಂದು ಮೋದಕವನ್ನು ತಿನ್ನುವ ಮುನ್ನ ದೇವರ ಕಡೆಗೆ ಭಕ್ತಿಯಿಂದ ನೋಡುತ್ತಾ ಅನುಮತಿ ಕೇಳುತ್ತಿದೆ.

ಶ್ವಾನದ ಈ ಮುದ್ದಾದ ವರ್ತನೆಯ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಬಿರುಗಾಳಿ ವೇಗದಲ್ಲಿ ಹರಿದಾಡ್ತಿದೆ.

ಇನ್​ಸ್ಟಾಗ್ರಾಂನಲ್ಲಿ ಈ ವಿಡಿಯೋವನ್ನು ಶೇರ್ ಮಾಡಲಾಗಿದ್ದು. ಅವನು ಮೊದಲು ದೇವರ ಪಾದವನ್ನು ಸ್ಪರ್ಶಿಸುವ ಮೂಲಕ ಮೋದಕ ತಿನ್ನಲು ಅನುಮತಿ ಕೇಳಿದ್ದಾನೆ ಎಂದು ಶೀರ್ಷಿಕೆ ನೀಡಲಾಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಮುದ್ದಾದ ಮೋದಕ ಕಳ್ಳ ಅಂತಾ ನಾಯಿಯನ್ನು ಕರೆದಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read