ನಾಯಿಗಳ ಅದ್ಧೂರಿ ವಿವಾಹ ಏರ್ಪಡಿಸಿದ ಗ್ರಾಮಸ್ಥರು | Watch

ಅಲಿಘರ್‌: ಭಾರತದಲ್ಲಿ ಅನೇಕ ಸಾಕುಪ್ರಾಣಿ ಮಾಲೀಕರು ತಮ್ಮ ನಾಯಿಗಳಿಗೆ ಮದುವೆ ಮಾಡಿಸುವ ವಿಲಕ್ಷಣ ಪ್ರವೃತ್ತಿಯನ್ನು ಪ್ರಾರಂಭಿಸಿದ್ದಾರೆ. ಅಂತಹ ಒಂದು ಇತ್ತೀಚಿನ ಘಟನೆಯಲ್ಲಿ, ಏಳು ತಿಂಗಳ ಹೆಣ್ಣು ನಾಯಿ ಜೆಲ್ಲಿಯನ್ನು ಉತ್ತರ ಪ್ರದೇಶದ ಅಲಿಘರ್‌ನಲ್ಲಿ ಭಾರತೀಯ ಸಾಂಪ್ರದಾಯಿಕ ವಿವಾಹದ ವಿಧಿವಿಧಾನಗಳೊಂದಿಗೆ ಮದುವೆ ಮಾಡಿಕೊಡಲಾಗಿದೆ.

ಟಾಮಿ ಮಾಜಿ ಸುಖ್ರಾವಲಿ ಗ್ರಾಮದ ಮುಖ್ಯಸ್ಥ ದಿನೇಶ್ ಚೌಧರಿ ಅವರ ಮುದ್ದಿನ ನಾಯಿಯಾಗಿದ್ದು, ಜೆಲ್ಲಿ ಅಟ್ರೌಲಿಯ ಟಿಕ್ರಿ ರಾಯ್ಪುರದ ನಿವಾಸಿ ಡಾ. ರಾಮ್ಪ್ರಕಾಶ್ ಸಿಂಗ್ ಅವರಿಗೆ ಸೇರಿದೆ.

ಮಕರ ಸಂಕ್ರಾಂತಿಯ ದಿನವಾದ ಜನವರಿ 14 ರಂದು ಟಾಮಿ ಮತ್ತು ಜೆಲ್ಲಿಯ ವಿವಾಹ ನಡೆದಿದೆ. ಡೊಳ್ಳು ಬಾರಿಸುವುದರೊಂದಿಗೆ ವಧು-ವರರಿಗೆ ಮಾಲೆ ಹಾಕುವ ಮೂಲಕ ವಿಶಿಷ್ಟ ವಿವಾಹಕ್ಕೆ ಅದ್ಧೂರಿ ಮೆರವಣಿಗೆ ಏರ್ಪಡಿಸಲಾಗಿತ್ತು.

‘ಬಾರಾತ್’ ನಂತರ ಮಾಲೆ ವಿನಿಮಯ ಮಾಡಿಕೊಂಡು ಸಕಲ ವಿಧಿವಿಧಾನಗಳೊಂದಿಗೆ ನಾಯಿಗಳಿಗೆ ಮದುವೆ ಮಾಡಲಾಯಿತು. ಬಾರಾತ್ ಮೆರವಣಿಗೆ ಮತ್ತು ವಿವಾಹ ಸಮಾರಂಭದ ವೀಡಿಯೊವನ್ನು ಸಹ ಎಎನ್‌ಐ ಹಂಚಿಕೊಂಡಿದೆ.

“ಮಕರ ಸಂಕ್ರಾಂತಿ ಸಂದರ್ಭದಲ್ಲಿ, ನಾವು ಮದುವೆಯನ್ನು ಆಯೋಜಿಸಿದ್ದೆವು. ನೆರೆಹೊರೆಯ ನಾಯಿಗಳಿಗೆ ದೇಸಿ ತುಪ್ಪದ ಆಹಾರವನ್ನು ಸಹ ವಿತರಿಸಲಾಯಿತು. ಅದಕ್ಕಾಗಿ ನಾವು ಸುಮಾರು ₹ 40,000-45,000 ಖರ್ಚು ಮಾಡಿದ್ದೇವೆ” ಎಂದು ಟಾಮಿ ಮಾಲೀಕ ದಿನೇಶ್ ಚೌಧರಿ ತಿಳಿಸಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read