ನೀರಿನೊಳಗೆ ಮನಸೆಳೆಯುವ ಜಿಮ್ನಾಸ್ಟಿಕ್ಸ್: ಬೆರಗಾಗಿಸುತ್ತೆ ವಿಡಿಯೋ

ಕೆಲವರಿಗೆ ನೀರಿನ ಬಗ್ಗೆ ವಿಶೇಷವಾದ ಒಲವು ಇರುತ್ತದೆ. ಫ್ರೀಸ್ಟೈಲ್‌ನ ಏಸಿಂಗ್‌ನಿಂದ ಹಿಡಿದು ಬ್ಯಾಕ್‌ಸ್ಟ್ರೋಕ್ ಮಾಡುವವರೆಗೆ, ಅವರ ಈಜು ಕೌಶಲ್ಯಗಳು ಜನಸಾಮಾನ್ಯರನ್ನು ಆಕರ್ಷಿಸುತ್ತವೆ.

ಉತ್ತಮ ಈಜುಗಾರನಾಗುವ ಪ್ರಮುಖ ಅಂಶವೆಂದರೆ ಉಸಿರನ್ನು ನೀರಿನ ಅಡಿಯಲ್ಲಿ ಹಿಡಿದಿಟ್ಟುಕೊಳ್ಳುವುದು. ಉಸಿರನ್ನು ದೀರ್ಘಕಾಲದವರೆಗೆ ಹಿಡಿದಿಟ್ಟುಕೊಳ್ಳುವ ಕ್ರಿಯೆಯನ್ನು ಒಮ್ಮೆ ಕರಗತ ಮಾಡಿಕೊಂಡರೆ, ಈಜು ಹೆಚ್ಚು ಸುಲಭವಾಗುತ್ತದೆ. ಅಂಥದ್ದೇ ಒಂದು ಕುತೂಹಲದ ವಿಡಿಯೋ ವೈರಲ್​ ಆಗಿದೆ.

ನುರಿತ ವೃತ್ತಿಪರ ಈಜುಪಟು ಫ್ಲೋರಿಯನ್ ದಗೌರಿ ನೀರಿನ ಅಡಿಯಲ್ಲಿ ಮನಸೆಳೆಯುವ ಜಿಮ್ನಾಸ್ಟಿಕ್ಸ್ ಪ್ರದರ್ಶಿಸುತ್ತಿರುವ ವಿಡಿಯೋ ಇದಾಗಿದೆ. ಇದು ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ಸೆಳೆದಿದೆ. ಯಾಹೂ ನ್ಯೂಸ್ ಪ್ರಕಾರ, 34 ವರ್ಷದ ಈ ಯುವಕ, ನೀರಿನ ಅಡಿಯಲ್ಲಿ ತನ್ನ ಉಸಿರನ್ನು ಹಿಡಿದಿಟ್ಟುಕೊಳ್ಳುವ ವಿಶ್ವದ ಎರಡನೇ ಸ್ಥಾನದಲ್ಲಿದ್ದಾರೆ.

ಈಗ ವೈರಲ್ ಆಗಿರುವ ವೀಡಿಯೊವನ್ನು ಎಬಿಸಿ7 ಫೆಬ್ರವರಿ 11 ರಂದು ಯೂಟ್ಯೂಬ್‌ನಲ್ಲಿ ಶೇರ್​ ಮಾಡಿಕೊಂಡಿದೆ. ಅಸಾಧ್ಯವಾದ ಉಸಿರಾಟ ನಿಯಂತ್ರಣ ಸಾಮರ್ಥ್ಯದೊಂದಿಗೆ ಈತ ನೀರಿನೊಳಗೆ ಪಲ್ಟಿ ಹೊಡೆಯುತ್ತಾನೆ. 360-ಡಿಗ್ರಿ ತಿರುಗುತ್ತಾನೆ. ಇದನ್ನು ನೋಡಿದರೆ ಮೈ ಝುಂ ಎನ್ನುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read