ಬಾಲಿವುಡ್​ ಹಾಡಿಗೆ ದನಿಯಾದ ದೆಹಲಿ ಪೊಲೀಸರು: ನೆಟ್ಟಿಗರು ಫಿದಾ

ನವದೆಹಲಿ: 2017 ರ ಚಲನಚಿತ್ರ ʼಬದ್ರಿನಾಥ್ ಕಿ ದುಲ್ಹನಿಯಾʼ ದ ‘ರೋಕೆ ನಾ ರೂಕೆ ನೈನಾ’ ಹಾಡಿನ ಭಾವಪೂರ್ಣ ನಿರೂಪಣೆಯೊಂದಿಗೆ ದೆಹಲಿಯ ಪೋಲೀಸರು ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ಆಕರ್ಷಿಸಿದ್ದಾರೆ.

ವೈರಲ್ ಆಗುತ್ತಿರುವ ವೀಡಿಯೊದಲ್ಲಿ, ರಜತ್ ರಾಥೋರ್ ಎಂಬ ಪೋಲೀಸ್ ಅಧಿಕಾರಿ ಸಂಗೀತ ವಾದ್ಯಗಳೊಂದಿಗೆ ಇಬ್ಬರು ಪೊಲೀಸರೊಂದಿಗೆ ಕಾರ್ಯಕ್ರಮವೊಂದರಲ್ಲಿ ಹಾಡನ್ನು ಪ್ರದರ್ಶಿಸುವುದನ್ನು ಕಾಣಬಹುದು.

ಪ್ರತಿಭಾನ್ವಿತ ಪೋಲೀಸ್ ಅಧಿಕಾರಿ ವೇದಿಕೆಯಲ್ಲಿ ಗಿಟಾರ್ ನುಡಿಸುವಾಗ ಭಾವನಾತ್ಮಕ ಹಾಡಿನ ಸಾಹಿತ್ಯವನ್ನು ಸುಂದರವಾಗಿ ಹಾಡುತ್ತಾರೆ. ಮೂಲತಃ ಅರಿಜಿತ್ ಸಿಂಗ್ ಹಾಡಿರುವ ಭಾವಪೂರ್ಣ ಹಾಡನ್ನು ಅಮಲ್ ಮಲ್ಲಿಕ್ ಸಂಯೋಜಿಸಿದ್ದಾರೆ ಮತ್ತು ಕುಮಾರ್ ಸಾಹಿತ್ಯವನ್ನು ಬರೆದಿದ್ದಾರೆ.

ಇನ್ಸ್ಟಾಗ್ರಾಮ್ ಖಾತೆಯಲ್ಲಿ “ರೋಕ್ ನಾ ರೂಕೆ ನೈನಾ” ಎಂಬ ಶೀರ್ಷಿಕೆಯೊಂದಿಗೆ ವೀಡಿಯೊವನ್ನು ಅವರು ಹಂಚಿಕೊಂಡಿದ್ದಾರೆ. ಇದು ನನ್ನ ಮೆಚ್ಚಿನ ಸಂಯೋಜನೆಗಳಲ್ಲಿ ಒಂದಾಗಿದೆ ಎಂದಿದ್ದಾರೆ. ಈ ವಿಡಿಯೋಗೆ ಸಹಸ್ರಾರು ಕಮೆಂಟ್​ಗಳು ಹಾಗೂ ಶ್ಲಾಘನೆಗಳು ವ್ಯಕ್ತವಾಗಿದೆ.

https://youtu.be/BEmXQoPDjAk

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read