ದೇಶದ ಮೊಟ್ಟ ಮೊದಲ ಸಾವಯವ ರೆಸ್ಟೋರೆಂಟ್ ಉದ್ಘಾಟನೆ ಮಾಡಿದ ಹಸುವೊಂದು ಆನ್ಲೈನ್‌ನಲ್ಲಿ ಸುದ್ದಿ ಮಾಡುತ್ತಿದೆ. ಉತ್ತರ ಪ್ರದೇಶದ ಲಖನೌನಲ್ಲಿ ಈ ರೆಸ್ಟೋರೆಂಟ್ ಉದ್ಘಾಟಿಸಿದ ಹಸುವಿಗೆ ಮೊದಲ ಬಾರಿಗೆ ಊಟ ಬಡಿಸಿದ್ದಾರೆ ಅಲ್ಲಿನ ಸಿಬ್ಬಂದಿ.
’ಆರ್ಗನಿಕ್ ಓಯಸಿಸ್’ ಹೆಸರಿನ ಈ ರೆಸ್ಟೋರೆಂಟ್‌ನಲ್ಲಿ ಸಾವಯವ ಕೃಷಿ ಉತ್ಪನ್ನಗಳನ್ನು ಬಳಸಿಕೊಂಡು ಆಹಾರ ಉತ್ಪಾದಿಸಲಾಗುತ್ತದೆ. ನಗರದ ಲುಲು ಮಾಲ್ ಬಳಿ ಇರುವ ಸುಶಾಂತ್ ಗಾಲ್ಫ್ ಸಿಟಿಯಲ್ಲಿ ಈ ರೆಸ್ಟೋರೆಂಟ್ ಆರಂಭಿಸಲಾಗಿದೆ.
ಮಾಜಿ ಉಪ ಪೊಲೀಸ್ ಜಿಲ್ಲಾ ವರಿಷ್ಠಾಧಿಕಾರಿ ಹಾಗೂ ರೆಸ್ಟೋರೆಂಟ್ ಮ್ಯಾನೇಜರ್ ಶೈಲೇಂದ್ರ ಸಿಂಗ್ ಈ ಕುರಿತು ಮಾತನಾಡಿದ್ದು, “ತನ್ನದೇ ಉತ್ಪಾದನೆ, ನಿಯಂತ್ರಣ ಹಾಗೂ ಸಂಸ್ಕರಣೆ ಹೊಂದಿರುವ ಇಂಥ ಒಂದು ರೆಸ್ಟೋರೆಂಟ್ ದೇಶದಲ್ಲೇ ಮೊದಲು ಎಂದು ನಾನು ಭಾವಿಸುತ್ತೇನೆ. ಆಹಾರ ಸೇವನೆ ಮಾಡಿದ ಬಳಿಕ ಖುದ್ದು ಗ್ರಾಹಕರಿಗೆ ಅದರ ವ್ಯತ್ಯಾಸ ತಿಳಿಯಲಿದೆ,” ಎಂದಿದ್ದಾರೆ.
https://twitter.com/ANINewsUP/status/1648366679737659392?ref_src=twsrc%5Etfw%7Ctwcamp%5Etweetembed%7Ctwterm%5E1648366679737659392%7Ctwgr%5Ee5ad9bcbb6260cd7ae567ebf7e1321ac643624cf%7Ctwcon%5Es1_&ref_url=https%3A%2F%2Fwww.freepressjournal.in%2Fviral%2Fwatch-cow-inaugurates-lucknow-restaurant-to-promote-organic-farming-produce