70ನೇ ವಯಸ್ಸಲ್ಲಿ ಸ್ಕೈ ಡೈವಿಂಗ್ ಮಾಡಿದ ಛತ್ತೀಸ್‌ಗಢದ ಆರೋಗ್ಯ ಸಚಿವ

ಛತ್ತೀಸ್‌ಗಢದ ಆರೋಗ್ಯ ಸಚಿವ ಟಿಎಸ್ ಸಿಂಗ್ ದೇವ್ ಅವರು ಆಸ್ಟ್ರೇಲಿಯಾದಲ್ಲಿ ಸ್ಕೈ ಡೈವಿಂಗ್ ಮಾಡಿದ್ದಾರೆ. 70 ವರ್ಷ ವಯಸ್ಸಿನ ಟಿಎಸ್ ಸಿಂಗ್ ಅವರು ಇಳಿವಯಸ್ಸಿನಲ್ಲಿ ಇಂತಹ ಅಸಾಧಾರಣ ಸಾಹಸ ಮಾಡಿದ್ದಾರೆ. ತಮ್ಮ ದೈನಂದಿನ ಚಟುವಟಿಕೆಗಳಿಂದ ವಿರಾಮ ತೆಗೆದುಕೊಂಡು ಧೈರ್ಯವಾಗಿ ಇಂತಹ ಕ್ಷಣವನ್ನು ಆನಂದಿಸಿದ್ದಾರೆ.

ಟಿಎಸ್ ಸಿಂಗ್ ಡಿಯೋ ಅವರು ಟ್ವಿಟ್ಟರ್‌ನಲ್ಲಿ ತಮ್ಮ ಸಾಹಸದ ವೀಡಿಯೊವನ್ನು ಹಂಚಿಕೊಂಡಿದ್ದಾರೆ, “ಆಕಾಶ ತಲುಪಲು ಯಾವುದೇ ಮಿತಿಗಳಿಲ್ಲ. ಆಸ್ಟ್ರೇಲಿಯಾದಲ್ಲಿ ಸ್ಕೈಡೈವಿಂಗ್‌ಗೆ ಹೋಗಲು ನನಗೆ ನಂಬಲಾಗದ ಅವಕಾಶವಿತ್ತು ಮತ್ತು ಇದು ನಿಜವಾಗಿಯೂ ಅಸಾಧಾರಣ ಸಾಹಸವಾಗಿತ್ತು. ಇದು ಉಲ್ಲಾಸದಾಯಕ ಮತ್ತು ಅಪಾರ ಆನಂದದಾಯಕ ಅನುಭವವಾಗಿತ್ತು. ” ಎಂದು ಟ್ವೀಟ್ ಮಾಡಿದ್ದಾರೆ.

ಟಿಎಸ್ ಸಿಂಗ್ ಡಿಯೋ ಅವರ ರೋಚಕ ಅನುಭವ ಕಂಡ ಛತ್ತೀಸ್‌ಗಢ ಸಿಎಂ ಭೂಪೇಶ್ ಭಗೇಲ್ ಪ್ರಶಂಶಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read