WATCH : ರೈಲು ಡಿಕ್ಕಿಯಾಗಿ ನರಳಿ ನರಳಿ ಮೃತಪಟ್ಟ ಆನೆ ; ಹೃದಯ ವಿದ್ರಾವಕ ವಿಡಿಯೋ ವೈರಲ್

ನವದೆಹಲಿ :  ರೈಲು ಡಿಕ್ಕಿಯಾಗಿ ಆನೆ ನರಳಿ ನರಳಿ ಮೃತಪಟ್ಟಿದ್ದು, ಹೃದಯ ವಿದ್ರಾವಕ ಘಟನೆಯ ವಿಡಿಯೋ ವೈರಲ್ ಆಗಿದೆ.

ಗಾಯಗೊಂಡ ಆನೆ ಚಲಿಸಲು ಹೆಣಗಾಡುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ, ಹೊಟ್ಟೆಯಿಂದ ತೀವ್ರ ರಕ್ತಸ್ರಾವವಾದ ನಂತರ ಕುಸಿದು ಬಿದ್ದು ಕೆಲವೇ ಕ್ಷಣಗಳಲ್ಲಿ ಆನೆ ಸಾಯುತ್ತದೆ. ಅಸ್ಸಾಂಗುವಾಹಟಿಯ ಹೊರವಲಯದಲ್ಲಿರುವ ಮೋರಿಗಾಂವ್ ಜಿಲ್ಲೆಯ ಜಾಗಿರೋಡ್ ರೈಲ್ವೆ ನಿಲ್ದಾಣದ ಬಳಿ ಬುಧವಾರ ಬೆಳಿಗ್ಗೆ 5 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.

ತೆಘೇರಿಯಾದಲ್ಲಿ ಸಿಲ್ಚಾರ್ಗೆ ತೆರಳುತ್ತಿದ್ದ ಕಾಂಚನಜುಂಗಾ ಎಕ್ಸ್ಪ್ರೆಸ್ ಆನೆಗೆ ಡಿಕ್ಕಿ ಹೊಡೆದಿದೆ. ಇತರ ಆನೆಗಳು ಹಳಿಗಳನ್ನು ದಾಟುವಲ್ಲಿ ಯಶಸ್ವಿಯಾದರೂ ದುರಾದೃಷ್ಟ ಈ ಆನೆ ರೈಲಿಗೆ ಸಿಲುಕಿದೆ.ಕೋಲ್ಕತಾ ನೈಟ್ ರೈಡರ್ಸ್ ಕ್ರಿಕೆಟ್ ತಾರೆ ವರುಣ್ ಚಕ್ರವರ್ತಿ ಈ ವಿಡಿಯೋವನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದು, ಇಂತಹ ದುರಂತಗಳನ್ನು ತಡೆಗಟ್ಟಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ಅಧಿಕಾರದಲ್ಲಿರುವ ಯಾರಾದರೂ ದಯವಿಟ್ಟು ಅಂತಹ ಸಾವುಗಳಿಗೆ ಸಂಬಂಧಿಸಿದಂತೆ ಯಾವುದೇ ಪರಿಹಾರವನ್ನು ಕಂಡುಹಿಡಿಯಬಹುದೇ!! ಅಥವಾ ಈ ಸಮಸ್ಯೆಯನ್ನು ಪರಿಹರಿಸುವುದು ಅಸಾಧ್ಯವೇ..?? ಈ!! ಇದು ಹೃದಯ ವಿದ್ರಾವಕವಾಗಿದೆ” ಎಂದು ವರುಣ್ ಸಿವಿ ಎಕ್ಸ್ ನಲ್ಲಿ ಹೇಳಿದ್ದಾರೆ.

https://twitter.com/i/status/1811357348222599632

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read