ಟಾಲಿವುಡ್‌ನ ಖ್ಯಾತ ನಟರಾದ ಅಲ್ಲು ಅರ್ಜುನ್ ಹಾಗೂ ನಟಿ ಸಮಂತಾ, ಇವರಿಬ್ಬರೂ ಬ್ಲಾಕ್‌ಬ್ಲಸ್ಟರ್ ಸಿನೆಮಾ ಪುಷ್ಪಾದಲ್ಲಿ ಮೈ ಚಳಿ ಬಿಟ್ಟು, ’ಊ ಅಂಟಾವಾ ಮಾವಾ’ ಹಾಡಿಗೆ ಡಾನ್ಸ್ ಮಾಡಿ ಬೇರೆಯವರಿಗೆ ಜ್ವರ ಬರುವ ಹಾಗೆ ಮಾಡಿದ್ದರು.
ಅದನ್ನ ನೋಡಿದ ಚಿತ್ರ ರಸಿಕರು ಫುಲ್ ಫಿದಾ ಆಗ್ಹೋಗಿದ್ದರು. ಈಗ ಅದೇ ಹಾಡಿಗೆ ಬಾಲಿವುಡ್‌ನ ಕಿಲಾಡಿ ಅಕ್ಷಯ್ ಕುಮಾರ್ ಡಾನ್ಸ್ ಮಾಡಿದ್ದಾರೆ. ಅವರಿಗೆ ಸಾಥ್ ಕೊಟ್ಟಿದ್ದು ಬಿಂದಾಸ್ ನೃತ್ಯಕ್ಕೆ ಹೆಸರುವಾಸಿಯಾಗಿರೋ ನೋರಾ ಫತೇಹಿ.
ಬಾಲಿವುಡ್ ನಟ ಅಕ್ಷಯ್ ಕುಮಾರ್ ಪ್ರಸ್ತುತ ತಮ್ಮ ‘ ದಿ ಎಂಟರ್ಟೈನರ್ಸ್ ಟೂರ್‘ಗಾಗಿ ಯುಎಸ್ ನಾದ್ಯಂತ ಪ್ರವಾಸ ಕೈಗೊಂಡಿದ್ದಾರೆ. ಇವರ ಈ ಪ್ರವಾಸದಲ್ಲಿ ನೋರಾ ಪತೇಹಿ, ಮೌನಿ ರಾಯ್, ಸೋನಮ್ ಬಾಜ್ವಾ ಮತ್ತು ಅನೇಕ ಗಾಯಕರು, ನೃತ್ಯಗಾರರು ಜೊತೆಗೆ ಇದ್ದಾರೆ.
ಅಟ್ಲಾಂಟಾದಲ್ಲಿ ಅಕ್ಷಯ್ ತಂಡ ಕಾರ್ಯಕ್ರಮ ನೀಡುತ್ತಿರುವಾಗ, ಪುಷ್ಪಾ ಸಿನೆಮಾದ ಹಾಡಿಗೆ ಸಹ ಹೆಜ್ಜೆ ಹಾಕಿದ್ಧಾರೆ. ನೋರಾ ಮತ್ತು ಅಕ್ಷಯ್ ಮಾಡಿರುವ ಡಾನ್ಸ್‌ನ ಈ ವಿಡಿಯೋ ವೈರಲ್ ಆಗಿದ್ದು, ಅಭಿಮಾನಿಗಳು ಈ ವಿಡಿಯೋ ನೋಡಿ ಅಕ್ಷಯ್ ಎನರ್ಜಿ ಹಾಗೂ ಡಾನ್ಸ್‌ಗೆ ಇನ್ನಷ್ಟು ಫಿದಾ ಆಗಿದ್ದಾರೆ. ಕೇವಲ ಈ ಡಾನ್ಸ್ ವಿಡಿಯೋ ಅಷ್ಟೆ ಅಲ್ಲ, ಈ ಕಾರ್ಯಕ್ರಮದ ಇನ್ನೂ ಅನೇಕ ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡ್ತಿದೆ.
ಈ ವಿಡಿಯೋದಲ್ಲಿ ಅಕ್ಷಯ್ ಕಂದು ಬಣ್ಣದ ಶರ್ಟ್ ಮತ್ತು ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದಾರೆ ಹಾಗೂ ಕುತ್ತಿಗೆಯಲ್ಲಿ ಒಂದು ಹೂವಿನ ಹಾರ ಹಾಕಿಕೊಂಡಿದ್ದಾರೆ. ಇಲ್ಲಿ ಅಕ್ಷಯ್ ಡಾನ್ಸ್ ಮಾಡ್ತಾ ಮಾಡ್ತಾನೇ ಪುಷ್ಪಾ ಸಿನೆಮಾದಲ್ಲಿ ಅಲ್ಲು ಅರ್ಜುನ್ ಮಾಡಿದ್ದ ಸ್ಟೈಲ್‌ನ್ನ ಮಾಡಿ, ಅಭಿಮಾನಿಗಳು ಇನ್ನಷ್ಟು ಹುಚ್ಚೆದ್ದು ಕುಣಿಯುವಂತೆ ಮಾಡಿದರು.
ನಟ ಅಕ್ಷಯ್ ಕುಮಾರ್ ಅವರ ಈ ವಿಡಿಯೋ ವೈರಲ್ ಆಗಿರುವ ಪರಿ ನೋಡ್ತಿದ್ರೆ ಗೊತ್ತಾಗುತ್ತೆ. ಜನರು ಈ ವಿಡಿಯೋವನ್ನ ಎಷ್ಟು ಇಷ್ಟಪಟ್ಟಿದ್ದಾರೆ ಅಂತ. ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಇದೇ ಟ್ರೆಂಡಿಂಗ್‌ನಲ್ಲಿ ಇರುವ ವಿಡಿಯೋ. ಫ್ಲಾಪ್‌ನಿಂದ ಬೇಸತ್ತಿರುವ ಅಕ್ಷಯ್ ಆದಷ್ಟು ಬೇಗ ಒಂದು ಹಿಟ್ ಸಿನೆಮಾ ಕೊಡಲಿ ಅನ್ನೊದೇ ಅಭಿಮಾನಿಗಳ ಆಸೆಯಾಗಿದೆ.
https://twitter.com/fpjindia/status/1631971890565611524?ref_src=twsrc%5Etfw%7Ctwcamp%5Etweetembed%7Ctwterm%5E1631971890565611524%7Ctwgr%5E31c2b10294cbf74a5c6f2ca0f7b1d12f90287d69%7Ctwcon%5Es1_&ref_url=https%3A%2F%2Fwww.freepressjournal.in%2Fentertainment%2Fbollywood%2Fwatch-akshay-kumar-nora-fatehi-dance-to-allu-arjun-samantha-ruth-prabhus-oo-antava-at-us-concert