ಕಾಬೂಲ್: ಕಾಬೂಲ್ ನಲ್ಲಿ ಅಫ್ಘಾನ್ ಪ್ರದೇಶದಲ್ಲಿ ತೆಹ್ರಿಕ್-ಇ-ತಾಲಿಬಾನ್ ಪಾಕಿಸ್ತಾನ್(ಟಿಟಿಪಿ) ಅಡಗುತಾಣಗಳನ್ನು ಗುರಿಯಾಗಿಸಿಕೊಂಡು ನಡೆಸಿದ ವೈಮಾನಿಕ ದಾಳಿಯಲ್ಲಿ 15 ಜನರು ಸಾವನ್ನಪ್ಪಿದ ನಂತರ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವೆ ಉದ್ವಿಗ್ನತೆ ಹೆಚ್ಚಿದೆ.
ಪಾಕಿಸ್ತಾನದ ವೈಮಾನಿಕ ದಾಳಿಗೆ ಅಫ್ಘಾನಿಸ್ತಾನ ಬಲವಾಗಿ ಪ್ರತಿದಾಳಿ ನಡೆಸಿ ಡುರಾಂಡ್ ಲೈನ್ನ ಉದ್ದಕ್ಕೂ ಬಹು ಮಿಲಿಟರಿ ಪೋಸ್ಟ್ಗಳ ಮೇಲೆ ದಾಳಿ ಮಾಡಿ, 50 ಕ್ಕೂ ಹೆಚ್ಚು ಪಾಕಿಸ್ತಾನಿ ಸೈನಿಕರನ್ನು ತಟಸ್ಥಗೊಳಿಸಲಾಗಿದೆ ಎಂದು ಹೇಳಿಕೊಂಡಿದೆ.
ಟ್ಯಾಂಕ್ ಗಳು, ಶಸ್ತ್ರಾಸ್ತ್ರಗಳು ಮತ್ತು ಪಾಕಿಸ್ತಾನಿ ಪಡೆಗಳ ಸಮವಸ್ತ್ರಗಳನ್ನು ಸಹ ಅಫ್ಘಾನ್ ಪಡೆಗಳು ವಶಪಡಿಸಿಕೊಂಡಿವೆ. ಪಾಕಿಸ್ತಾನಿ ಪಡೆಗಳ ಪ್ಯಾಂಟ್ಗಳನ್ನು ಪ್ರದರ್ಶಿಸುವ ಅಫ್ಘಾನ್ ಪಡೆಗಳ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಪಾಕಿಸ್ತಾನದಿಂದ 48 ಗಂಟೆಗಳ ಕದನ ವಿರಾಮ
ಅಫ್ಘಾನ್ ಪಡೆಗಳ ಕೈಯಲ್ಲಿ ತನ್ನ ಪಡೆಗಳು ಭಾರೀ ನಷ್ಟವನ್ನು ಅನುಭವಿಸುತ್ತಿರುವುದರಿಂದ, ಪಾಕಿಸ್ತಾನ ಬುಧವಾರ ಅಫ್ಘಾನಿಸ್ತಾನದೊಂದಿಗೆ 48 ಗಂಟೆಗಳ ಕದನ ವಿರಾಮವನ್ನು ಘೋಷಿಸಿದೆ.
ಪಾಕಿಸ್ತಾನದ ಕೋರಿಕೆಯ ಮೇರೆಗೆ ಕದನ ವಿರಾಮವನ್ನು ಮಾಡಲಾಗಿದೆ ಎಂದು ತಾಲಿಬಾನ್ ಹೇಳಿದೆ. ಇದಕ್ಕೂ ಮೊದಲು, ತಾಲಿಬಾನ್ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ ಅವರು ಅಫ್ಘಾನಿಸ್ತಾನವು ಬೇರೆ ಯಾವುದೇ ದೇಶದೊಂದಿಗೆ ಸಂಘರ್ಷವನ್ನು ಬಯಸುವುದಿಲ್ಲ. ಆದರೆ ಇಸ್ಲಾಮಾಬಾದ್ ಶಾಂತಿಯನ್ನು ಬಯಸದಿದ್ದರೆ ಕಾಬೂಲ್ಗೆ “ಇತರ ಆಯ್ಕೆಗಳಿವೆ” ಎಂದು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದರು.
⚠️I hope this video is watched by every Pakistani Pashtun who still defends Afghanistan⚠️
— ☣️𝐖𝐀𝐑 𝐆𝐋𝐎𝐁𝐄 𝐍𝐄𝐖𝐒 (@WarGlobeNews) October 14, 2025
They(🇦🇫) insult you on one side but on the other side they send you TTP/HGB/IMP terrorists to murder you and then they send you their females for education and medical treatments🇵🇰#TTP pic.twitter.com/JK0RVOtveq