ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ತಂದೆ ಮತ್ತು ಮಗಳ ನಡುವಿನ ಒಂದು ಮುದ್ದಾದ ಸಂವಾದದ ವಿಡಿಯೋ ಭಾರಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ತಂದೆಯೊಬ್ಬರು ತಮ್ಮ ಮುದ್ದು ಮಗಳಿಗೆ ಬೈಸೆಪ್ಸ್ ಅನ್ನು ತೋರಿಸುತ್ತಾ, “ನೋಡು ಈ ಮಸಲ್ಸ್ ! ನಿನಗೂ ಇಂತಹ ಮಸಲ್ಸ್ ಬರುತ್ತೆ. ಹೇಗೆ ಪೋಸ್ ಕೊಡ್ತೀಯಾ, ತೋರಿಸು?” ಎಂದು ಹೇಳುತ್ತಿರುವುದು ಸೆರೆಯಾಗಿದೆ. ಇದನ್ನು ಕೇಳಿದ ಆ ಕಂದಮ್ಮ ಹಾಸಿಗೆಯ ಮೇಲೆ ಮಲಗಿಕೊಂಡು ತನ್ನ ಪುಟ್ಟ ಕೈಗಳನ್ನು ಚಾಚಿ ತಂದೆಯನ್ನು ಅನುಕರಿಸಲು ಮುದ್ದಾಗಿ ಪ್ರಯತ್ನಿಸುತ್ತದೆ.
ಆಕೆಯ ಆ ಮುಗ್ಧ ಪ್ರತಿಕ್ರಿಯೆ ಕಂಡು ತಂದೆ – ತಾಯಿ ಇಬ್ಬರೂ ನಗುತ್ತಾರೆ. ತಂದೆ ತಮಾಷೆಯಾಗಿ, “ಹೀಗೆ ನಾವು ಇಬ್ಬರೂ ಪೋಸ್ ಕೊಡೋಣ” ಎನ್ನುತ್ತಾರೆ. ಆಗ ಆ ಪುಟಾಣಿ ಸಂತೋಷದಿಂದ ಜೋರಾಗಿ ಕಿರುಚುತ್ತಾ ತನ್ನ ಖುಷಿಯನ್ನು ವ್ಯಕ್ತಪಡಿಸುತ್ತಾಳೆ.
ನಂತರ ತಂದೆ, ಮಗಳಿಗೆ ಮುತ್ತಿಟ್ಟು, “ನಾವು ಇಬ್ಬರೂ ಜಿಮ್‌ಗೆ ಹೋಗಿ ಹೀಗೆ ಪೋಸ್ ಕೊಡೋಣ” ಎನ್ನುತ್ತಾರೆ. ಅವರು ಮತ್ತೆ ತಮ್ಮ ಬೈಸೆಪ್ಸ್ ತೋರಿಸಿದಾಗ, ಆ ಮುದ್ದು ಕಂದಮ್ಮ ಅವರ ಉತ್ಸಾಹಕ್ಕೆ ಸರಿಸಮನಾಗಿ ತನ್ನ ಪುಟ್ಟ ಕೈಗಳನ್ನು ಅಗಲವಾಗಿ ಚಾಚಿ ಅದೇ ರೀತಿ ಮುದ್ದಾಗಿ ಕೂಗುತ್ತಾಳೆ. ಈ ಪುಟ್ಟದಾದ ಆದರೆ ಮನಸ್ಸಿಗೆ ಹಿತವೆನಿಸುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಎಲ್ಲರ ಗಮನ ಸೆಳೆದಿದೆ.
ಈ ವಿಡಿಯೋ ಅನೇಕ ನೆಟ್ಟಿಗರ ಮನಸ್ಸನ್ನು ಗೆದ್ದಿದೆ, ಮತ್ತು ಕಾಮೆಂಟ್ ವಿಭಾಗವು ಆ ಮಗುವಿಗೆ ಪ್ರೀತಿ ಮತ್ತು ಹಾರೈಕೆಗಳಿಂದ ತುಂಬಿ ತುಳುಕುತ್ತಿದೆ. ಹರ್ಷ್ ಸೈನಿ ಎಂಬುವವರು, “ಓಹ್ ಮೈ ಗಾಡ್, ಈ ಮಗುವಿಗೆ ಯಾವುದೇ ಕೆಟ್ಟ ಕಣ್ಣು ತಾಗದಿರಲಿ, ಎಷ್ಟು ಮುದ್ದಾಗಿದೆ ನೋಡಿ!” ಎಂದು ಬರೆದಿದ್ದಾರೆ. ಇನ್ನೊಬ್ಬ ಬಳಕೆದಾರರು, “ಸರ್, ನಿಮ್ಮ ಮಗಳು ಯಾವುದಕ್ಕೂ ಕಮ್ಮಿ ಇಲ್ಲ. ಅವಳು ನಿಮಗೇ ಟಫ್ ಕಾಂಪಿಟೇಷನ್ ಕೊಡ್ತಾ ಇದ್ದಾಳೆ, ಮತ್ತು ಅವಳು ತನ್ನದೇ ಆದ ಭಾಷೆಯಲ್ಲಿ ಎಲ್ಲವನ್ನೂ ವ್ಯಕ್ತಪಡಿಸುತ್ತಿದ್ದಾಳೆ. ತುಂಬಾ ಮುದ್ದು, ದೇವರು ನಿಮ್ಮನ್ನು ಆಶೀರ್ವದಿಸಲಿ!” ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನು ಕೆಲವರು ಆ ಮುದ್ದು ಕಂದನ ಭವಿಷ್ಯದ ಬಗ್ಗೆ ತಮ್ಮ ಸಲಹೆಗಳನ್ನು ಹಂಚಿಕೊಂಡಿದ್ದಾರೆ. ವಿಭಾ ಭಾರದ್ವಾಜ್ ಎಂಬುವವರು, “ಅವಳು ದೊಡ್ಡವಳಾದಾಗ ಅವಳಿಗೆ ಸ್ವಯಂ ರಕ್ಷಣೆಯನ್ನು ಕಲಿಸಲು ಮರೆಯಬೇಡಿ. ಇಂದಿನ ಜಗತ್ತಿನಲ್ಲಿ ಹೆಣ್ಣುಮಕ್ಕಳಿಗೆ ಇದು ಬಹಳ ಮುಖ್ಯ…” ಎಂದು ಹೇಳಿದ್ದಾರೆ. ಅದೇ ರೀತಿ ನೇಹಾ ನಂದ ಕುಮಾರ್ ಎಂಬುವವರು ತಮಾಷೆಯಾಗಿ, “ನೋಡಿದ್ರೆ ಅವಳು ಹೇಳ್ತಾ ಇರೋ ಹಾಗೆ ಇದೆ, ‘ಅಪ್ಪಾ, ನೀವು ಎಷ್ಟೇ ಸ್ಟ್ರಾಂಗ್ ಆದ್ರೂ, ನೀವು ಯಾವಾಗಲೂ ನನ್ನ ಮಾತು ಕೇಳಬೇಕು’ ಅಂತ!” ಎಂದು ಕಾಮೆಂಟ್ ಮಾಡಿದ್ದಾರೆ.