ಸೋಶಿಯಲ್ ಮೀಡಿಯಾದಲ್ಲಿ ಆಗಾಗ ವೈರಲ್ ಆಗುವ ಕೆಲ ವಿಡಿಯೋಗಳು ಶಾಕಿಂಗ್ ಆಗಿರುತ್ತೆ. ಅದರಲ್ಲೂ ಕೆಲ ವೈರಲ್ ವಿಡಿಯೋಗಳಂತೂ ಜನರು ಮಾಡುವ ಹುಚ್ಚಾಟಗಳು ಹೇಗೇಗಿರುತ್ತೆ ಅನ್ನೋದಕ್ಕೆ ಸಾಕ್ಷಿಯಾಗಿರುತ್ತೆ. ಅದೇ ರೀತಿಯ ವಿಡಿಯೋ ಒಂದು ಈಗ ನೆಟ್ಟಿಗರನ್ನ ಬೆಚ್ಚಿಬೀಳುವಂತೆ ಮಾಡಿದೆ.
ರೂಪಾಲಿ ಶರ್ಮಾ ಅನ್ನೋರು ತಮ್ಮ ಟ್ವಿಟ್ಟರ್ ಅಕೌಂಟ್ನಲ್ಲಿ ಈ ವಿಡಿಯೋವನ್ನ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ನಾಲ್ಕು ಜನ ಹುಡುಗಿಯರು ಒಂದೇ ಸ್ಕೂಟಿಯಲ್ಲಿ ಹೋಗ್ತಿರುವುದನ್ನ ಗಮನಿಸಬಹುದು. ಅದು ಕೂಡ ಹೆಲ್ಮೆಟ್ ಇಲ್ಲದೆ.
ಒಂದು ಸ್ಕೂಟಿಯಲ್ಲಿ ಸಾಮಾನ್ಯವಾಗಿ ಇಬ್ಬರು ಅಷ್ಟೆ ಕುಳಿತುಕೊಳ್ಳಬಹುದು. ಆದರ ಇಲ್ಲಿ ನಾಲ್ಕು ಜನ ಹುಡುಗಿಯರು ಕೂತು, ಅತಿ ವೇಗದಿಂದ ಹೋಗ್ತಿದ್ದಾರೆ. ಅಲ್ಲೇ ಕಾರಿನಲ್ಲಿ ಪಯಣಿಸುತ್ತಿದ್ದ ವ್ಯಕ್ತಿಯೊಬ್ಬರು ಇದನ್ನ ತಮ್ಮ ಮೊಬೈಲ್ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾರೆ.
ಟ್ವಿಟ್ಟರ್ನಲ್ಲಿ ಪೋಸ್ಟ್ ಮಾಡಲಾಗಿರುವ ಈ ವಿಡಿಯೋ ಶೀರ್ಷಿಕೆಯಲ್ಲಿ” ಎಲ್ಲರ ಗಮನಕ್ಕೆ, ವಾಶಿಯ ಪಾಮ್ ಬೀಚ್ ರಸ್ತೆಯಲ್ಲಿ ಕಂಡು ಬಂದ ದೃಶ್ಯ ಇದು. 1ಸ್ಕೂಟಿಯಲ್ಲಿ 4 ಹುಡುಗಿಯರು ಹೆಲ್ಮೆಟ್ ಇಲ್ಲದೆ ಗಾಡಿ ಓಡಿಸುತ್ತಿರುವ ದೃಶ್ಯವಿದು. ಹೀಗೆ ಗಾಡಿ ಓಡಿಸುತ್ತಿರುವಾಗ ಸೆಲ್ಫಿ ತೆಗೆದುಕೊಳ್ತಿದ್ದಾರೆ. ಇದು ಸಾವಿಗೆ ಆಹ್ವಾನ ಕೊಟ್ಟಂತಿದೆ. ಇವರಿಗೆ ಈ ರೀತಿಯ ಸಾಹಸದಿಂದ ಆಗುವ ಅಪಾಯ ಏನು ಅನ್ನೋ ಅರಿವು ಆಗಬೇಕಾಗಿದೆ’ ಎಂದು ಬರೆಯಲಾಗಿದೆ.
ಈ ಪೋಸ್ಟ್ ಮುಂಬೈ ಟ್ರಾಫಿಕ್ ಪೊಲೀಸರ ಗಮನಕ್ಕೆ ಬಂದಿದ್ದು, ಯುವತಿಯರ ವಿರುದ್ಧ ಕ್ರಮವನ್ನ ಕೈಗೊಂಡಿದ್ದಾರೆ. ಅಷ್ಟೆ ಅಲ್ಲ ಜೊತೆಗೆ ಭಾರೀ ದಂಡವನ್ನ ಸಹ ವಿಧಿಸಿದ್ದಾರೆ.
https://twitter.com/RupaliVKSharma/status/1639889993178181634?ref_src=twsrc%5Etfw%7Ctwcamp%5Etweetembed%7Ctwterm%5E1639889993178181634%7Ctwgr%5E712a88fce8b70515642a95155531055d596fb972%7Ctwcon%5Es1_&ref_url=https%3A%2F%2Fwww.news18.com%2Fbuzz%2Fwatch-4-girls-all-without-helmets-on-a-single-scooty-take-to-mumbai-roads-7401889.html