Watch | ಪ್ರಾಣವನ್ನೇ ಪಣಕ್ಕಿಟ್ಟು ಹಾವನ್ನು ರಕ್ಷಿಸಿದ ಯುವಕ

ಮನುಷ್ಯರಂತೆ ಪ್ರಾಣಿಗಳಿಗೂ ಜೀವವಿದೆ ಎಂದು ಸಂಕಷ್ಟಕ್ಕೆ ಸಿಲುಕಿದ ಪ್ರಾಣಿಗಳನ್ನು ರಕ್ಷಿಸುವ ಕೆಲಸಕ್ಕೆ ನಾಗರಿಕರು ಮುಂದಾಗುತ್ತಾರೆ. ವಿಷಕಾರಿಯಲ್ಲದಂತಹ ಪಕ್ಷಿಗಳು, ನಾಯಿ, ಬೆಕ್ಕು , ಕೋತಿ, ಹಸು ಸೇರಿದಂತೆ ಕೆಲ ಪ್ರಾಣಿಗಳನ್ನು ತೊಂದರೆ ಸ್ಥಿತಿಯಿಂದ ರಕ್ಷಿಸೋದನ್ನ ನೋಡಿದ್ದೇವೆ. ಆದರೆ ವಿಷ ಸರ್ಪ ಒಂದನ್ನ ವ್ಯಕ್ತಿಯೊಬ್ಬ ತನ್ನ ಪ್ರಾಣ ಪಣಕ್ಕಿಟ್ಟು ರಕ್ಷಿಸಿದ್ದಾರೆ. ಎದೆನಡುಗಿಸೋ ಈ ವಿಡಿಯೋ ವೈರಲ್ ಆಗಿದ್ದು ನೆಟ್ಟಿಗರು ಹಾವು ರಕ್ಷಕನ ಧೈರ್ಯವನ್ನ ಮೆಚ್ಚಿ ಕೊಂಡಾಡಿದ್ದಾರೆ.

ಪ್ರಾಣಿ ರಕ್ಷಕರೊಬ್ಬರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವೀಡಿಯೊವನ್ನು ಹಂಚಿಕೊಂಡ ನಂತರ ಘಟನೆ ಬೆಳಕಿಗೆ ಬಂದಿದೆ. ಹಾವನ್ನು ಉಳಿಸುವ ಪ್ರಯತ್ನದಲ್ಲಿ ವ್ಯಕ್ತಿಯೊಬ್ಬ ಬಾವಿಯೊಳಗೆ ನೇತಾಡುತ್ತಾ ತನ್ನ ಜೀವವನ್ನ ಪಣಕ್ಕಿಟ್ಟಿದ್ದ.

ಹಾವನ್ನು ಸುರಕ್ಷಿತವಾಗಿ ಚೀಲದೊಳಗೆ ಹಾಕಲು ಮನುಷ್ಯ ತನ್ನೆಲ್ಲ ಪ್ರಯತ್ನಗಳನ್ನು ಮಾಡುತ್ತಿರುವುದನ್ನು ಕಾಣಬಹುದು. ಚೀಲದೊಳಗೆ ಹೋಗುವುದನ್ನು ತಡೆಯಲು ಹಾವು ಪ್ರಯತ್ನಿಸಿತು. ಕೊನೆಗೆ ಹಾವನ್ನ ಚೀಲದೊಳಕ್ಕೆ ಹಾಕುವಲ್ಲಿ ಆತ ಯಶಸ್ವಿಯಾಗಿದ್ದಾನೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read