ಹೋಬಾರ್ಟ್: ವಾಷಿಂಗ್ಟನ್ ಸುಂದರ್(ಅಜೇಯ 49) ಭರ್ಜರಿ ಆಟದ ನೆರವಿನಿಂದ ಭಾರತ ತಂಡವು ಅತಿಥೇಯ ಆಸ್ಟ್ರೇಲಿಯಾ ವಿರುದ್ಧ ನಡೆದ ಮೂರನೇ ಟಿ20 ಅಂತರಾಷ್ಟ್ರೀಯ ಪಂದ್ಯದಲ್ಲಿ ಐದು ವಿಕೆಟ್ ಅಂತರದ ಗೆಲುವು ಸಾಧಿಸಿದೆ. ಈ ಮೂಲಕ ಐದು ಪಂದ್ಯಗಳ ಟಿ20 ಸರಣಿಯಲ್ಲಿ 1-1 ರ ಸಮಬಲ ಸಾಧಿಸಿದೆ. ಸರಣಿಯ ಮೊದಲ ಪಂದ್ಯ ಮಳೆಯಿಂದ ರದ್ದಾಗಿತ್ತು.
ಹೋಬಾರ್ಟ್ ನ ಓವಲ್ ಕ್ರೀಡಾಂಗಣದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯಾ ಟಿಮ್ ಡೇವಿಡ್, ಮಾರ್ಕಸ್ ಸ್ಟೊಯ್ನಿಸ್ ಅವರ ಸ್ಫೋಟಕ ಅರ್ಧ ಶತಕಗಳ ನೆರವಿನಿಂದ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 186 ರನ್ ಗಳಿಸಿತು. ಆಸ್ಟ್ರೇಲಿಯಾ ಪರ ಟಿಮ್ ಡೇವಿಡ್ 74, ಮಾರ್ಕಸ್ ಸ್ಟೊಯ್ನಿಸ್ 64 ರನ್ ಗಳಿಸಿದರು. ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 186 ರನ್ ಕಲೆ ಹಾಕಿತ್ತು.
187 ರನ್ ಸ್ಪರ್ಧಾತ್ಮಕ ಗುರಿ ಬೆನ್ನಟ್ಟಿದ ಭಾರತ 18.3 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 188 ರನ್ ಗಳಿಸಿ ಗೆಲುವು ಸಾಧಿಸಿತು. ಭಾರತದ್ ಪರವಾಗಿ ವಾಷಿಂಗ್ಟನ್ ಸುಂದರ್ ಕೇವಲ 23 ಎಸೆತಗಳಲ್ಲಿ ಅಜೇಯ 49ರನ್ ಗಳಿಸಿದರು. ಅವರ ಇನಿಂಗ್ಸ್ ನಲ್ಲಿ 4 ಸಿಕ್ಸರ್, 3 ಬೌಂಡರಿಗಳು ಸೇರಿದ್ದವು. ಅಭಿಷೇಕ್ ಶರ್ಮಾ 25, ತಿಲಕ್ ವರ್ಮಾ 29, ಸೂರ್ಯಕುಮಾರ್ ಯಾದವ್ 24, ಜಿತೇಶ್ ಶರ್ಮಾ ಅಜೇಯ 22 ರನ್ ಗಳಿಸಿದರು. ಸರಣಿಯ ಮೊದಲ ಟಿ20 ಪಂದ್ಯ ಮಳೆಯಿಂದ ರದ್ದಾಗಿತ್ತು. ಎರಡನೇ ಪಂದ್ಯದಲ್ಲಿ ಭಾರತ ನಾಲ್ಕು ವಿಕೆಟ್ ಅಂತರದಿಂದ ಸೋಲು ಕಂಡಿತ್ತು.
3RD T20I. India Won by 5 Wicket(s) https://t.co/X5xeZ0Mc5a #TeamIndia #AUSvIND #3rdT20I
— BCCI (@BCCI) November 2, 2025
4,6,6 – @Sundarwashi5 is on fire 🔥🔥
— BCCI (@BCCI) November 2, 2025
Live – https://t.co/7lGDijSY0L #TeamIndia #AUSvIND #3rdT20I pic.twitter.com/SMsO0L31MC
