ಮದುವೆಗೂ ಮುನ್ನ ಮಾಡೆಲ್‌ ಜೊತೆ ಲಿವಿನ್ ಸಂಬಂಧದಲ್ಲಿದ್ದರಾ ರಾಜೇಶ್ ಖನ್ನಾ ?

ಬಾಲಿವುಡ್ ದಂತಕಥೆ ರಾಜೇಶ್ ಖನ್ನಾ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ? ತಮ್ಮ ವಿಶಿಷ್ಟ ಡೈಲಾಗ್‌ಗಳು ಹಾಗೂ ಮ್ಯಾನರಿಸಂಗಳಿಂದ ರಾಜೇಶ್ ಖನ್ನಾ ಅಭಿಮಾನಿಗಳ ನೆನಪಲ್ಲಿ ಸದಾ ಇರುತ್ತಾರೆ.

ನಟಿ ಡಿಂಪಲ್ ಕಪಾಡಿಯಾರನ್ನು ಮದುವೆಯಾಗಿದ್ದ ರಾಜೇಶ್ ಖನ್ನಾ, 1982ರಲ್ಲಿ ಆಕೆಯಿಂದ ವಿಚ್ಛೇದನ ಪಡೆದರು. ಈ ವೇಳೆ ರಾಜೇಶ್‌ರಿಂದ ಟ್ವಿಂಕಲ್ ಹಾಗೂ ರಿಂಕಿ ಹೆಸರಿನ ಇಬ್ಬರು ಮಕ್ಕಳು ಜನಿಸಿದ್ದರು.

ಕಪಾಡಿಯಾರನ್ನು ವರಿಸುವ ಮುನ್ನ ರಾಜೇಶ್ ಮಾಡೆಲ್ ಒಬ್ಬರೊಂದಿಗೆ ಲಿವಿಂಗ್-ಟುಗೆದರ್‌ ಸಂಬಂಧದಲ್ಲಿ ಇದ್ದರು ಎಂಬ ಸುದ್ದಿಯೊಂದು ಜೋರಾಗಿತ್ತು. ನಟಿ ಅಂಜು ಮಹೇಂದ್ರ ಹಾಗೂ ರಾಜೇಶ್ ಏಳು ವರ್ಷಗಳ ಮಟ್ಟಿಗೆ ಲಿವಿನ್ ಸಂಬಂಧದಲ್ಲಿದ್ದರಂತೆ.

ಸ್ಟಾರ್‌ಡಸ್ಟ್‌ಗೆ ಕೊಟ್ಟ ಸಂದರ್ಶನವೊಂದರಲ್ಲಿ ಈ ಕುರಿತು ಮಾತನಾಡಿದ ಆಂಜು, “ಆತನಿಗೆ ತನ್ನ ಕಾಲಿಗೆ ಬೀಳುತ್ತಿದ್ದ ಮಿಕ್ಕವರಂತೆ ನಾನೂ ಆಗಬೇಕೆಂಬ ಆಸೆ ಇತ್ತು. ನಾನು ಆತನನ್ನು ಪ್ರೀತಿಸುತ್ತಿದ್ದೆ. ಆದರೆ ಆತನಿಗೆ ಗುಲಾಮಳಾಗಲು ಸಿದ್ಧಳಿರಲಿಲ್ಲ. ನನಗೆ ಆತ ಜತಿನ್ ಅಥವಾ ಜಸ್ಟಿನ್ ಅಷ್ಟೇ. ನಾನು ಪ್ರೀತಿಸಿದ ವ್ಯಕ್ತಿ, ರಾಜೇಶ್ ಖನ್ನಾ ಅಥವಾ ಸೂಪರ್‌ಸ್ಟಾರ್‌ ಅಥವಾ ಒಂದು ದೊಡ್ಡ ಸಂಚಲನ ಅಲ್ಲ,” ಎಂದು ದಿಟ್ಟವಾಗಿ ಹೇಳಿಕೊಂಡಿದ್ದರು.

ಅಂಜು ಕುರಿತು ಮಾತನಾಡಿದ ಖನ್ನಾ, ಆಕೆಯೂ ಸಹ ತನಗೆ ಸಾಕಷ್ಟು ಸಮಯ ಕೊಡುತ್ತಿರಲಿ‌ಲ್ಲ ಎಂದಿದ್ದು, ಬಹಳಷ್ಟು ಬಾರಿ ತಾವು ಆಕೆಯ ಮನೆಗೆ ಹೋದಾಗ ಆಕೆ ತನ್ನ ಗೆಳೆಯರೊಂದಿಗೆ ಇರುತ್ತಿದ್ದರಿಂದ ಏಕಾಂತದಲ್ಲಿ ಆಕೆಯೊಂದಿಗೆ ಸಮಯ ಕಳೆಯಲು ಆಗುತ್ತಿರಲಿಲ್ಲ ಎಂದಿದ್ದರು.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read