ಎಚ್ಚರ: ಈ ಹಣ್ಣುಗಳನ್ನು ಫ್ರಿಡ್ಜ್‌ನಲ್ಲಿಟ್ಟು ತಿಂದರೆ ಲಾಭದ ಬದಲು ದೇಹಕ್ಕೆ ಆಗಬಹುದು ಹಾನಿ….!

ಸಾಮಾನ್ಯವಾಗಿ ನಾವೆಲ್ಲ ಹಣ್ಣು ಮತ್ತು ತರಕಾರಿಗಳನ್ನು ಫ್ರಿಡ್ಜ್‌ನಲ್ಲಿಡುತ್ತೇವೆ. ಫ್ರಿಡ್ಜ್ ನಲ್ಲಿಟ್ಟರೆ ಅವು ಹೆಚ್ಚು ಕಾಲ ತಾಜಾತನದಿಂದ ಇರುತ್ತವೆ ಮತ್ತು ಕೆಡುವುದನ್ನು ತಡೆಯಬಹುದು ಎಂದು ಭಾವಿಸುತ್ತೇವೆ. ಆದರೆ ರೆಫ್ರಿಜರೇಟರ್‌ನಲ್ಲಿ ಎಲ್ಲಾ ಹಣ್ಣುಗಳನ್ನು ಇಡಬಾರದು. ಕೆಲವು ಹಣ್ಣುಗಳನ್ನು ಫ್ರಿಡ್ಜ್‌ನಲ್ಲಿಟ್ಟು ತಿನ್ನಬಾರದು.

ಕೆಲವು ಆಯ್ದ ಹಣ್ಣುಗಳನ್ನು ಮಾತ್ರ ಇಡಬೇಕು. ರೆಫ್ರಿಜರೇಟರ್‌ನಲ್ಲಿ ಇಡುವುದರಿಂದ ಕೆಲವು ಹಣ್ಣುಗಳು ಹಾಳಾಗುತ್ತವೆ ಅಥವಾ ವಿಷಕಾರಿಯಾಗಬಹುದು. ವಿಶೇಷವಾಗಿ ಪಲ್ಪಿ ಹಣ್ಣುಗಳನ್ನು ರೆಫ್ರಿಜರೇಟರ್‌ನಲ್ಲಿ ಇಡಬಾರದು.

ಬಾಳೆಹಣ್ಣುಬಾಳೆಹಣ್ಣನ್ನು ರೆಫ್ರಿಜರೇಟರ್‌ನಲ್ಲಿ ಇಡಬಾರದು. ಬಾಳೆಹಣ್ಣನ್ನು ರೆಫ್ರಿಜರೇಟರ್‌ನಲ್ಲಿಟ್ಟರೆ ಬಹುಬೇಗ ಕಪ್ಪಾಗುತ್ತದೆ. ಬಾಳೆಹಣ್ಣಿನ ಕಾಂಡದಿಂದ ಎಥಿಲೀನ್ ಅನಿಲ ಬಿಡುಗಡೆಯಾಗುತ್ತದೆ. ಇದರಿಂದಾಗಿ ಇತರ ಹಣ್ಣುಗಳು ಬೇಗನೆ ಹಾಳಾಗಬಹುದು.

ಕಲ್ಲಂಗಡಿಬೇಸಿಗೆಯಲ್ಲಿ ಎಲ್ಲರೂ ಕಲ್ಲಂಗಡಿ ಹಣ್ಣನ್ನು ಹೆಚ್ಚಾಗಿ ತಿನ್ನುತ್ತಾರೆ. ಹಣ್ಣು ದೊಡ್ಡದಾಗಿರುವುದರಿಂದ ಒಂದೇ ಬಾರಿಗೆ ತಿನ್ನಲು ಕಷ್ಟವಾಗುತ್ತದೆ. ಅಂತಹ ಸಂದರ್ಭಗಳಲ್ಲಿ ಕಲ್ಲಂಗಡಿಗಳನ್ನು ಕತ್ತರಿಸಿ ಫ್ರಿಡ್ಜ್‌ನಲ್ಲಿಡುತ್ತಾರೆ. ಕಲ್ಲಂಗಡಿಯನ್ನು ಫ್ರಿಡ್ಜ್‌ನಲ್ಲಿ ಇಡುವುದರಿಂದ ಅದರಲ್ಲಿರುವ ಎಂಟಿಒಕ್ಸಿಡೆಂಟ್‌ಗಳು ನಾಶವಾಗುತ್ತವೆ.

ಸೇಬು –  ಸೇಬು ಹಣ್ಣುಗಳನ್ನು ಫ್ರಿಡ್ಜ್‌ನಲ್ಲಿ ಇರಿಸಿದರೆ ಅವು ಬೇಗನೆ ಕಳಿತು ಹೋಗುತ್ತವೆ. ಇದಕ್ಕೆ ಕಾರಣ ಸೇಬುಗಳಲ್ಲಿ ಕಂಡುಬರುವ ಸಕ್ರಿಯ ಕಿಣ್ವಗಳು. ಇವುಗಳಿಂದ ಸೇಬು ತ್ವರಿತವಾಗಿ ಹಣ್ಣಾಗುತ್ತದೆ. ದೀರ್ಘಕಾಲದವರೆಗೆ ಸೇಬು ಹಣ್ಣುಗಳನ್ನು ಸಂಗ್ರಹಿಸಲು ಬಯಸಿದರೆ ಕಾಗದದಲ್ಲಿ ಸುತ್ತಿ ಇರಿಸಿ. ಇದಲ್ಲದೆ ಪ್ಲಮ್, ಚೆರ್ರಿ ಮತ್ತು ಪೀಚ್‌ನಂತಹ ಬೀಜಗಳನ್ನು ಹೊಂದಿರುವ ಹಣ್ಣುಗಳನ್ನು ಸಹ ರೆಫ್ರಿಜರೇಟರ್‌ನಲ್ಲಿ ಇಡಬಾರದು.

ಮಾವು ಮಾವಿನ ಹಣ್ಣುಗಳನ್ನು ರೆಫ್ರಿಜರೇಟರ್‌ನಲ್ಲಿ ಇಡಬೇಡಿ. ಇದರಿಂದ ಮಾವಿನ ಹಣ್ಣಿನಲ್ಲಿರುವ ಆ್ಯಂಟಿಆಕ್ಸಿಡೆಂಟ್‌ಗಳು ಕಡಿಮೆಯಾಗಲು ಪ್ರಾರಂಭಿಸುತ್ತವೆ. ಮಾವಿನ ಪೋಷಕಾಂಶಗಳೂ ನಾಶವಾಗುತ್ತವೆ.

ಲಿಚಿಬೇಸಿಗೆಯಲ್ಲಿ ರುಚಿಕರವಾದ ಲಿಚಿ ಹಣ್ಣನ್ನು ಫ್ರಿಡ್ಜ್‌ನಲ್ಲಿ ಇಡಬೇಡಿ. ಲಿಚಿಯನ್ನು ರೆಫ್ರಿಜರೇಟರ್‌ನಲ್ಲಿ ಇರಿಸುವುದರಿಂದ ಅದರ ಮೇಲಿನ ಭಾಗವು ಚೆನ್ನಾಗಿದ್ದರೂ ತಿರುಳು ಒಳಗಿನಿಂದ ಹಾಳಾಗಲು ಪ್ರಾರಂಭಿಸುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read