ಮದುವೆ ದಿನ ಸುಂದರವಾಗಿ ಕಾಣಿಸಬೇಕಾ……? ಈ ತಪ್ಪುಗಳನ್ನು ಮಾಡಿದ್ರೆ ಕೆಡುತ್ತೆ ಮುಖದ ಅಂದ

ಮದುವೆ ಎಂಬುದು ಜೀವನದಲ್ಲಿ ಒಮ್ಮೆ ಮಾತ್ರ ಆಗುವಂತದು. ಮದುವೆ ದಿನದಂದು ಸುಂದರವಾಗಿ ಕಾಣಬೇಕೆಂಬ ಆಸೆ ಎಲ್ಲಾ ಹುಡುಗಿಯರಿಗೂ ಇದ್ದೇ ಇರುತ್ತದೆ. ಅಂತವರು ಮುಖದ ಅಂದ ಕೆಡಿಸುವಂತಹ ಈ ತಪ್ಪುಗಳನ್ನು ಮಾಡಬೇಡಿ.

ಮದುವೆ ದಿನ ಹತ್ತಿರ ಬರುತ್ತಿರುವಾಗ ವಧು ತಿನ್ನುವ ಆಹಾರದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಇಲ್ಲವಾದರೆ ಇದು ಮುಖದ ಚರ್ಮದ ಮೇಲೆ ಪ್ರಭಾವ ಬೀರುತ್ತದೆ. ದೇಹದ ಪಿಎಚ್ ಪ್ರಮಾಣ ಕಡಿಮೆ ಮಾಡುವಂತಹ ಆಹಾರಗಳನ್ನು ಸೇವಿಸಬಾರದು.

ಉದಾಹರಣೆಗೆ ಕಾರ್ಬೊನೇಟೆಡ್ ಪಾನೀಯಗಳು, ಆಲ್ಕೋಹಾಲ್, ಸಕ್ಕರೆ, ಮತ್ತು ಮೊಟ್ಟೆಯ ಹಳದಿ ಭಾಗಗಳನ್ನು ಸೇವಿಸಬಾರದು. ಇದರಿಂದ ಮೊಡವೆಗಳು, ಚರ್ಮದ ಉರಿ, ಮುಂತಾದ ಸಮಸ್ಯೆಗಳು ಉಂಟಾಗುತ್ತದೆ. ಅದರ ಬದಲು ಪಿಎಚ್ ಪ್ರಮಾಣ ಸಮತೋಲನದಲ್ಲಿಡುವಂತಹ ಹಸಿರು ತರಕಾರಿಗಳು, ಅರಿಶಿನ, ಚಿಯಾ ಬೀಜಗಳು ಮತ್ತು ನಿಂಬೆಹಣ್ಣುಗಳನ್ನು ಸೇವಿಸಬೇಕು.

ಹಾಗೇ ಮುಖ ತೊಳೆಯುವ ಸೋಪ್ ಬಗ್ಗೆಯೂ ಕಾಳಜಿ ಇರಬೇಕು. ತುಂಬಾ ಹಾರ್ಡ್ ಆಗಿರುವ ಸೋಪ್ ಗಳನ್ನು ಬಳಸಬಾರದು. ಇದು ಮುಖದ ತೇವಾಂಶವನ್ನು ಕಡಿಮೆ ಮಾಡುತ್ತದೆ. ಮೃದುವಾದ ಸೋಪ್ ಅಥವಾ ಫೇಸ್ ವಾಶ್ ಗಳನ್ನು ಬಳಸಿ.

ಬ್ಯೂಟಿ ಪಾರ್ಲರ್ ಗೆ ಹೋಗಿ ಕೆಮಿಕಲ್ ಯುಕ್ತ ಫೇಶಿಯಲ್ ಗಳನ್ನು ಮಾಡಿಸಬೇಡಿ. ಇದು ಕೆಲವೊಮ್ಮೆ ಮುಖದ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಆದ್ದರಿಂದ ಮನೆಯಲ್ಲೇ ತಯಾರಿಸುವಂತಹ ಫೇಸ್ ಪ್ಯಾಕ್ ಗಳನ್ನು ಬಳಸಿ. ಇದು ಮುಖಕ್ಕೆ ತುಂಬಾ ಒಳ್ಳೆಯದು.

ಬಿಸಿಲಿನಲ್ಲಿ ಹೆಚ್ಚು ಸಮಯ ಕಳೆಯಬೇಡಿ. ಇದರಿಂದ ಮುಖದ ಚರ್ಮ ಕಳೆಗುಂದುತ್ತದೆ. ಹೊರಗಡೆ ಹೋಗುವಾಗ ಸನ್ ಸ್ಕ್ರೀನ್ ಬಳಸುವುದು ಉತ್ತಮ.

ಸ್ನಾನ ಮಾಡಿದ ನಂತರ ಸೋಪ್ ನಿಂದಾಗಿ ಸ್ಕಿನ್ ತೇವಾಂಶವನ್ನು ಕಳೆದುಕೊಳ್ಳುತ್ತದೆ. ಆದ್ದರಿಂದ ಸ್ನಾನ ಮಾಡಿದ ತಕ್ಷಣ ಮಾಯಶ್ಚರೈಸಿಂಗ್ ಕ್ರೀಂಗಳನ್ನು ಬಳಸಿ ಇದು ನಿಮ್ಮ ಚರ್ಮದ ತೇವಾಂಶವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read