ಮೊಡವೆಗಳಿಂದ ಮುಕ್ತಿ ಬೇಕೆ….? ಇಂದಿನಿಂದಲೇ ಈ ಪದಾರ್ಥಗಳ ಸೇವನೆ ನಿಲ್ಲಿಸಿಬಿಡಿ….!

ಮುಖದಲ್ಲಿರುವ ಮೊಡವೆಗಳ ನಿವಾರಣೆಗೆ ಸಾಕಷ್ಟು ಸರ್ಕಸ್‌ ಮಾಡುತ್ತೇವೆ. ಬಗೆಬಗೆಯ ಕ್ರೀಮ್‌, ಬ್ಯೂಟಿ ಟ್ರೀಟ್ಮೆಂಟ್‌ಗಳ ಮೊರೆಹೋಗುತ್ತೇವೆ. ಕ್ಲಿಯರ್‌ ಸ್ಕಿನ್‌ ಇರಬೇಕು ಅನ್ನೋದು ಪ್ರತಿಯೊಬ್ಬರ ಆಸೆ. ಆದರೆ ಮಾಲಿನ್ಯ, ಒತ್ತಡ ಮತ್ತು ಆಹಾರದಲ್ಲಿನ ವ್ಯತ್ಯಯದಿಂದಾಗಿ ಅನೇಕರು ಮೊಡವೆಗಳ ಸಮಸ್ಯೆಗಳನ್ನು ಎದುರಿಸುತ್ತಾರೆ. ಮೊಡವೆಗಳಿಂದ ಮುಕ್ತಿ ಪಡೆಯಲು ಮೊದಲು ಆಹಾರದ ಬಗ್ಗೆ ಗಮನ ಹರಿಸಬೇಕು. ಕೆಲವು ವಸ್ತುಗಳ  ಸೇವನೆಯನ್ನು ತಪ್ಪಿಸಬೇಕು.

ಹಾಲೊಡಕು ಪ್ರೋಟೀನ್- ಅದರಲ್ಲಿ ಹೆಚ್ಚಿನ ಪ್ರಮಾಣದ ಅಮೈನೋ ಆಮ್ಲಗಳಿರುತ್ತವೆ. ಅದು ಮುಖದ ಮೇಲೆ ಮೊಡವೆಗಳನ್ನು ಉಂಟುಮಾಡಬಹುದು. ಮೊಡವೆಗಳಿಂದ ಸಂಪೂರ್ಣ ಮುಕ್ತಿ ಪಡೆಯಲು ಹಾಲೊಡಕು ಪ್ರೋಟೀನ್ ಸೇವಿಸುವುದನ್ನು ನಿಲ್ಲಿಸಬೇಕು.

ಹಾಲಿನ ಉತ್ಪನ್ನಗಳು ಹಾಲು ಮತ್ತು ಸಿಹಿ ಮಜ್ಜಿಗೆಯಂತಹ ಡೈರಿ ಉತ್ಪನ್ನಗಳು ಮೊಡವೆಗಳನ್ನು ಉಂಟುಮಾಡಬಹುದು. ಆದ್ದರಿಂದ ಡೈರಿ ಉತ್ಪನ್ನಗಳ ಸೇವನೆಯನ್ನು ನಿಲ್ಲಿಸಿ.

ಕಾರ್ನ್ ಫ್ಲೇಕ್ಸ್ – ಅನೇಕ ಜನರು ಪ್ರತಿದಿನ ಬೆಳಗ್ಗೆ ಕಾರ್ನ್ ಫ್ಲೇಕ್ಸ್ ತಿನ್ನುವ ಅಭ್ಯಾಸವನ್ನು ಹೊಂದಿರುತ್ತಾರೆ. ಆದರೆ ಕಾರ್ನ್‌ಫ್ಲೇಕ್ಸ್‌ ಸೇವನೆಯಿಂದ ಚರ್ಮಕ್ಕೆ ಹಾನಿಯಾಗಬಹುದು. ಇದರಲ್ಲಿ ಚರ್ಮಕ್ಕೆ ಹಾನಿಕಾರಕವಾದ HFCS ಜೊತೆಗೆ ಸಕ್ಕರೆ, ಮಾಲ್ಟ್ ಪರಿಮಳವಿರುತ್ತದೆ. ಕಾರ್ನ್‌ಫ್ಲೇಕ್ಸ್‌ನಿಂದ ದೂರವಿದ್ದರೆ ಮುಖದ ಕಾಂತಿ ಹೆಚ್ಚುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read