ʼಬೊಜ್ಜುʼ ಕರಗಿಸಲು ಬಯಸಿದ್ದೀರಾ ? ಹಾಗಾದ್ರೆ ಈ ಸಮಯದಲ್ಲಿ ತೂಕವನ್ನು ಅಳೆಯಬೇಡಿ

ಬೊಜ್ಜಿನ ಸಮಸ್ಯೆ ಈಗ ಅನೇಕರನ್ನು ಕಾಡುತ್ತಿದೆ. ಹಾಗಾಗಿ ಎಲ್ಲರೂ ತೂಕ ಇಳಿಸಲು ಸಾಕಷ್ಟು ಪ್ರಯತ್ನ ಮಾಡುತ್ತಾರೆ. ಈ ವೇಳೆ ಪ್ರತಿದಿನ ತೂಕವನ್ನು ಅಳೆಯುವುದು ಸಾಮಾನ್ಯ. ಈ ವೇಳೆ ತೂಕದಲ್ಲಿ ಯಾವುದೇ ಸಣ್ಣ ಬದಲಾವಣೆಯಾದರೂ ಅಸಮಾಧಾನಗೊಳ್ಳುತ್ತಾರೆ. ಅದು ಅವರ ಮಾನಸಿಕ ಆರೋಗ್ಯಕ್ಕೆ ಹಾನಿಕಾರಕವಾಗಿದೆ.

ತೂಕವನ್ನು ಅಳೆಯಲು ಸರಿಯಾದ ಸಮಯ ಮತ್ತು ವಿಧಾನವನ್ನು ಅನುಸರಿಸಬೇಕು. ತೂಕವನ್ನು ಅಳೆಯುವಾಗ ಮಾಡುವ ಪ್ರಮಾದದಿಂದಾಗಿ ಲೆಕ್ಕಾಚಾರ ತಪ್ಪಾಗಬಹುದು.

ತಿಂದ ತಕ್ಷಣ ತೂಕ ಅಳೆಯಬೇಡಿ : ಊಟ ಅಥವಾ ಉಪಹಾರ ತಿಂದ ತಕ್ಷಣ ತೂಕ ಅಳೆಯಬಾರದು. ಹೆಚ್ಚು ನೀರು ಮತ್ತು ಆಹಾರವನ್ನು ಸೇವಿಸಿರುವುದರಿಂದ ತೂಕ ಹೆಚ್ಚಿರುತ್ತದೆ.

ನೀರು ಕುಡಿದ ತಕ್ಷಣ ತೂಕ ಅಳೆಯಬೇಡಿ: ಹೆಚ್ಚು ನೀರು ಕುಡಿದಾಗ ತೂಕ ನೋಡಬಾರದು. ಹೆಚ್ಚಿನ ಪ್ರಮಾಣದ ನೀರನ್ನು ಸೇವಿಸಿದರೆ, ತೂಕವು ತಕ್ಷಣವೇ ಹೆಚ್ಚಾಗುತ್ತದೆ, ಆದ್ದರಿಂದ ಈ ಸಮಯದಲ್ಲಿ ತೂಕವನ್ನು ಅಳೆಯಬೇಡಿ.

ವ್ಯಾಯಾಮದ ನಂತರ ತೂಕ ಅಳೆಯಬೇಡಿ: ವ್ಯಾಯಾಮದ ಸಮಯದಲ್ಲಿ ನಾವು ಚೆನ್ನಾಗಿ ಬೆವರು ಹರಿಸುತ್ತೇವೆ. ಇದು ತೂಕ ನಷ್ಟಕ್ಕೆ ಕಾರಣವಾಗಬಹುದು. ಆದರೆ ಇದು ತಾತ್ಕಾಲಿಕವಾಗಿರುತ್ತದೆ, ದೇಹದ ತೂಕದಲ್ಲಿ ನಿಜವಾದ ಬದಲಾವಣೆ ಆಗಿರುವುದಿಲ್ಲ.

ಮುಟ್ಟಿನ ಸಮಯದಲ್ಲಿ ತೂಕ ಅಳೆಯಬೇಡಿ: ಮಹಿಳೆಯರು ಮುಟ್ಟಿನ ಸಮಯದಲ್ಲಿ ತಮ್ಮ ತೂಕವನ್ನು ಅಳೆಯಬಾರದು.  ಏಕೆಂದರೆ ಹಾರ್ಮೋನುಗಳ ಬದಲಾವಣೆಗಳಿಂದ ತೂಕ ಹೆಚ್ಚಾಗಬಹುದು. ಮುಟ್ಟಿನ ಸಮಯದಲ್ಲಿ ಶ್ರೋಣಿಯ ಪ್ರದೇಶವು ದಪ್ಪಗಾಗಿರುತ್ತದೆ. ಇದು ತಾತ್ಕಾಲಿಕವಾಗಿ ಆ ಪ್ರದೇಶದಲ್ಲಿ ಒತ್ತಡ ಮತ್ತು ಅಸ್ವಸ್ಥತೆಯನ್ನು ಹೆಚ್ಚಿಸುತ್ತದೆ. ಇದರಿಂದಾಗಿ ನಿಮ್ಮ ತೂಕ ಕಡಿಮೆ ಅಥವಾ ಹೆಚ್ಚಿರಬಹುದು.ʼ

ನಮ್ಮ ದೇಹದ ತೂಕವು ಸಾಮಾನ್ಯವಾಗಿ ಉಳಿದ ಸಮಯಕ್ಕಿಂತ ಬೆಳಗ್ಗೆ ಕಡಿಮೆ ಇರುತ್ತದೆ. ಆದ್ದರಿಂದ ನಿಗದಿತ ಸಮಯದಲ್ಲಿ ತೂಕವನ್ನು ಅಳೆದು ನೋಡಬೇಕು. ರಾತ್ರಿ ಸರಿಯಾಗಿ ನಿದ್ದೆ ಮಾಡದೇ ಇದ್ದರೆ ಹಾರ್ಮೋನುಗಳಲ್ಲಿ ವ್ಯತ್ಯಾಸವಾಗುತ್ತದೆ. ಇದು ಹಸಿವನ್ನು ಹೆಚ್ಚಿಸುತ್ತದೆ ಅಥವಾ ಚಯಾಪಚಯವನ್ನು ನಿಧಾನಗೊಳಿಸುತ್ತದೆ. ಈ ಸಂದರ್ಭದಲ್ಲಿ ತೂಕ ನೋಡಿದ್ರೆ ಹೆಚ್ಚಾಗಿರುವ ಸಾಧ್ಯತೆ ಇರುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read