ನದಿಯಲ್ಲಿ ಸಿಕ್ತು 28 ವರ್ಷಗಳ ಹಿಂದೆ ಕಳೆದು ಹೋಗಿದ್ದ ಪರ್ಸ್…!

ಎಷ್ಟೋ ವರ್ಷಗಳ ಹಿಂದೆ ಕಳೆದ ಹಳೆ ವಸ್ತುಗಳು ಮರಳಿ ಸಿಗೋದಿದೆ. ಮನೆ ಕ್ಲೀನ್‌ ಮಾಡುವಾಗ ಇಲ್ಲವೆ ಮಣ್ಣಿನಡಿ ಹೂತು ಹೋಗಿದ್ದ ವಸ್ತುಗಳನ್ನು ಜನರು ಮತ್ತೆ ಪಡೆಯುತ್ತಾರೆ. ಅರಿಜೋನಾದಲ್ಲಿ ಈಗ ಅಂತಹದ್ದೇ ಘಟನೆ ಬೆಳಕಿಗೆ ಬಂದಿದೆ.

ಮೆಸಾದ ಜೆರೆಮಿ ಬಿಂಗಮ್, ಸಾಲ್ಟ್ ನದಿಗೆ ತನ್ನ ಕುಟುಂಬದ ಜೊತೆ ಹೋಗಿದ್ದ. ಈ ಸಮಯದಲ್ಲಿ ನದಿಯಲ್ಲೊಂದು ವಸ್ತು ಕಾಣಿಸಿದೆ. ಜೆರೆಮಿ ಬಿಂಗಮ್‌ ಕೈ ಹಾಕಿ ನೋಡಿದಾಗ ಪರ್ಸ್‌ ಸಿಕ್ಕಿದೆ. ಅದನ್ನು ತೆಗೆದು ನೋಡಿದಾಗ ಅದ್ರಲ್ಲಿ ಒಂದು ಕ್ರೆಡಿಟ್‌ ಕಾರ್ಡ್‌ ಇತ್ತು. ಅಲ್ಲದೆ ಜೂಲಿಯಾ ಸಿಯಾ ಎಂಬ ಹೆಸರಿನ ಮಹಿಳೆಯ ಚಾಲನಾ ಪರವಾನಗಿ ಸಿಕ್ಕಿತ್ತು.

ಬಿಂಗಮ್‌, ಜೂಲಿಯಾಳನ್ನು ಸಾಮಾಜಿಕ ಜಾಲತಾಣದಲ್ಲಿ ಹುಡುಕುವ ಪ್ರಯತ್ನ ಮಾಡಿದ್ದಾನೆ. ಕೊನೆಗೂ ಜೂಲಿಯಾ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಿದ್ದಾಳೆ. ನಂತ್ರ ಕಳೆದು ಹೋದ ಪರ್ಸ್‌ ಬಗ್ಗೆ ಮಾಹಿತಿ ನೀಡಿದ್ದಾಳೆ. 1995 ರಲ್ಲಿ ಅವಳು ಮತ್ತು ಅವಳ ಆಗಿನ ಗೆಳೆಯ ಪಾಲ್ ತನ್ನ ಸೋದರ ಸಂಬಂಧಿ ಅರ್ನಾಲ್ಡ್ ಅನ್ನು ಭೇಟಿ ಮಾಡಲು ಅರಿಜೋನಾಗೆ ಹೋಗಿದ್ದರಂತೆ.

ಅರ್ನಾಲ್ಡ್ ಹೊಸ ಟ್ರಕ್‌ ಖರೀದಿ ಮಾಡಿದ್ದನಂತೆ. ನದಿಯಲ್ಲಿ ಇದನ್ನು ದಾಟಿಸುವ ಪ್ರಯತ್ನ ನಡೆಸಿದ್ದ. ಈ ವೇಳೆ ಟ್ರಕ್‌ ನದಿಯಲ್ಲಿ ಬಿದ್ದಿತ್ತು. ಎಲ್ಲರೂ ಸುರಕ್ಷಿತವಾಗಿ ಹೊರಗೆ ಬಂದಿದ್ದರು. ಆದ್ರೆ ಎಲ್ಲ ವಸ್ತುಗಳು ನದಿ ಪಾಲಾಗಿದ್ದವು. ಈ ವೇಳೆ ಪರ್ಸ್‌ ಕೂಡ ಕಳೆದಿತ್ತು ಎಂದು ಜೂಲಿಯಾ ಹೇಳಿದ್ದಾಳೆ. ಕೆಲವೇ ದಿನಗಳಲ್ಲಿ ಆಕೆ ಪರ್ಸ್‌ ಆಕೆಗೆ ತಲುಪಲಿದೆ. ಪರ್ಸ್‌ ನೋಡಲು ಹಾಗೂ ಡ್ರೈವಿಂಗ್‌ ಲೈಸೆನ್ಸ್‌ ನೋಡಲು ತುಂಬಾ ಆಸಕ್ತಿ ಹೊಂದಿದ್ದೇನೆ ಎಂದು ಜೂಲಿಯಾ ಹೇಳಿದ್ದಾಳೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read