ಗೋಡೆ ಕುಸಿದು ಕಾರ್ಮಿಕರಿಬ್ಬರು ದುರ್ಮರಣ

ಕಾಸರಗೋಡು: ಪೈಪ್ ಲೈನ್ ಅಳವಡಿಕೆ ಕಾಮಗಾರಿ ವೇಳೆ ಆವರಣ ಗೋಡೆ ಕುಸಿದು ಕಾರ್ಮಿಕರಿಬ್ಬರು ಸಾವನ್ನಪ್ಪಿದ ಘಟನೆ ಕಾಸರಗೋಡು ನಗರದ ಮಾರ್ಕೆಟ್ ರಸ್ತೆಯಲ್ಲಿ ನಡೆದಿದೆ.

ಕರ್ನಾಟಕ ಮೂಲದ ಲಕ್ಷ್ಮಪ್ಪ, ಬಿ.ಎಂ. ಬಸಯ್ಯ ಮೃತಪಟ್ಟವರು ಎಂದು ಹೇಳಲಾಗಿದೆ. ಕುಸಿದು ಬಿದ್ದ ಆವರಣ ಗೋಡೆಯ ಅವಶೇಷಗಳಡಿ ಸಿಲುಕಿದ್ದ ಮತ್ತಿಬ್ಬರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೈಪ್ಲೈನ್ ಕಾಮಗಾರಿಗಾಗಿ ಗುಂಡಿ ತೋಡುತ್ತಿದ್ದಾಗ ಗುಂಡಿಯ ಬದಿಯಲ್ಲಿದ್ದ ಆವರಣ ಗೋಡೆ ಕುಸಿದು ದುರಂತ ಸಂಭವಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read