ವಾಕಿಂಗ್ ಮಾಡುವುದರಿಂದಾಗುತ್ತೆ ಹಲವು ‘ಪ್ರಯೋಜನ’

ಆರೋಗ್ಯವೇ ಭಾಗ್ಯ. ದೈಹಿಕ ಮತ್ತು ಮಾನಸಿಕವಾಗಿ ಸದೃಢವಾಗಿದ್ದರೆ, ಕೆಲಸ, ಸಾಧನೆ ಮಾಡಲು ಅನುಕೂಲವಾಗುತ್ತದೆ ಎಂಬ ಮಾತು ಹಿಂದಿನಿಂದಲೂ ಇದೆ.

ಹಾಗಾಗಿ ದೇಹವನ್ನು ಸದೃಢವಾಗಿಟ್ಟುಕೊಳ್ಳಲು ಅನೇಕರು ಶ್ರಮ ವಹಿಸುತ್ತಾರೆ. ಆರೋಗ್ಯಕರ ಜೀವನಕ್ಕಾಗಿ ಏನೆಲ್ಲಾ ಅನುಸರಿಸುತ್ತಾರೆ ಎಂಬುದನ್ನು ಸಾಮಾನ್ಯವಾಗಿ ನೋಡಿರುತ್ತೀರಿ.

ವ್ಯಾಯಾಮ, ಯೋಗ, ಜಿಮ್ ಮೊದಲಾದವುಗಳ ಮೂಲಕ ಸದೃಢ ಆರೋಗ್ಯದ ಗುಟ್ಟನ್ನು ಕಂಡುಕೊಳ್ಳುತ್ತಾರೆ. ಇದರೊಂದಿಗೆ ವಾಕಿಂಗ್ ಮಾಡುವುದರಿಂದಲೂ ಹಲವು ಪ್ರಯೋಜನಗಳಿವೆ. ನಡಿಗೆ ನಿಮ್ಮ ದೇಹ ಮತ್ತು ಮನಸ್ಸನ್ನು ಉಲ್ಲಾಸದಿಂದ ಇಡುತ್ತದೆ.

ಬೆಳಿಗ್ಗೆ ಮತ್ತು ಸಂಜೆ ವಾಕ್ ಮಾಡುವುದರಿಂದ ಜಡತ್ವ ದೂರವಾಗುತ್ತದೆ. ಇದರಿಂದ ದಿನವಿಡೀ ಉತ್ಸಾಹವಿರುತ್ತದೆ. ದೇಹ ಮತ್ತು ಮನಸ್ಸಿನ ಆರೋಗ್ಯಕ್ಕೆ ವಾಕಿಂಗ್ ಒಳ್ಳೆಯದು. ವಾಕಿಂಗ್ ಜೊತೆಗೆ ಸರಳ ವ್ಯಾಯಾಮ ಮಾಡುವುದರಿಂದಲೂ ಅನುಕೂಲವಾಗುತ್ತದೆ. ಯುವಕರು, ವಯಸ್ಕರು, ಹಿರಿಯರಿಗೂ ವಾಕಿಂಗ್ ನಿಂದ ಹಲವು ಪ್ರಯೋಜನಗಳಿವೆ ಎಂದು ಹೇಳುತ್ತಾರೆ ತಿಳಿದವರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read