ಬೆಳಗಾವಿ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(ವಿಟಿಯು) ಪರೀಕ್ಷೆ ಮುಗಿದ ಒಂದು ಗಂಟೆಯೊಳಗೆ ಫಲಿತಾಂಶ ಪ್ರಕಟಿಸಿ ಹೊಸ ದಾಖಲೆ ಬರೆದಿದೆ.
ಬಿಇ, ಬಿಟೆಕ್, ಬಿ-ಪ್ಲ್ಯಾನ್, ಬಿಆರ್ಕ್, ಬಿಎಸ್ಸಿ(ಆನರ್ಸ್) ಪರೀಕ್ಷೆಯ ಫಲಿತಾಂಶಗಳನ್ನು ಪರೀಕ್ಷೆ ಮುಗಿದ ಕೇವಲ ಒಂದು ಗಂಟೆ ಒಳಗೆ ಪ್ರಕಟಿಸಿ ಎಲ್ಲಾ ವಿದ್ಯಾರ್ಥಿಗಳಿಗೆ ವಾಟ್ಸಾಪ್ ಮೂಲಕ ಫಲಿತಾಂಶ ಕಳುಹಿಸಲಾಗಿದೆ ಎಂದು ವಿಟಿಯು ಕುಲಪತಿ ಪ್ರೊ. ಎಸ್. ವಿದ್ಯಾಶಂಕರ್ ಹೇಳಿದ್ದಾರೆ.
ಶುಕ್ರವಾರ ಮಧ್ಯಾಹ್ನ 2.30 ರಿಂದ 5:30ರ ವರೆಗೆ ಪರೀಕ್ಷೆ ನಡೆದಿದ್ದು, ಸಂಜೆ 6.30ಕ್ಕೆ ಫಲಿತಾಂಶ ಪ್ರಕಟಿಸಲಾಗಿದೆ. 2021ರ ಬ್ಯಾಚ್ ನ ಅಂತಿಮ ಸೆಮಿಸ್ಟರ್ ನ 50,321 ವಿದ್ಯಾರ್ಥಿಗಳ ಪರೀಕ್ಷೆ ಮುಗಿದ ಒಂದು ಗಂಟೆಯ ಬಳಿಕ ಫಲಿತಾಂಶ ಪ್ರಕಟಿಸಲಾಗಿದೆ.
ಈ ಹಿಂದೆ 3 ಗಂಟೆಯಲ್ಲಿ ಫಲಿತಾಂಶ ಪ್ರಕಟಿಸಿದ ವಿಟಿಯು ಐತಿಹಾಸಿಕ ದಾಖಲೆಯನ್ನು ಮತ್ತೆ ನಾವೇ ಮುರಿದಿದ್ದೇವೆ. ಜೂನ್ 3ರಿಂದ ತಾತ್ಕಾಲಿಕ ಪದವಿ ಪ್ರಮಾಣ ಪತ್ರಗಳನ್ನು ವಿತರಿಸುವುದಾಗಿ ಎಂದು ಕುಲಪತಿ ವಿದ್ಯಾಶಂಕರ ಹೇಳಿದ್ದಾರೆ.