ಮಹಿಳಾ ಪ್ರೀಮಿಯರ್ ಲೀಗ್ ಆರಂಭಕ್ಕೆ ಸಿದ್ಧತೆ ನಡೆದಿದ್ದು, ಮುಂಬೈನಲ್ಲಿ ಈಗಾಗಲೇ ಹರಾಜು ಪ್ರಕ್ರಿಯೆ ನಡೆದಿದೆ. ಈ ಹರಾಜಿನಲ್ಲಿ ಕರ್ನಾಟಕ ಮೂಲದ ವೃಂದಾ ದಿನೇಶ್ ಎರಡನೇ ಅತ್ಯಧಿಕ ಮೊತ್ತ ಅಂದರೆ 1.30 ಕೋಟಿ ರೂಪಾಯಿಗಳಿಗೆ ಯುಪಿ ವಾರಿಯರ್ಸ್ ತಂಡದ ಪಾಲಾಗಿದ್ದಾರೆ.
ಹರಾಜು ಪ್ರಕ್ರಿಯೆ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿರುವ ವೃಂದಾ ದಿನೇಶ್, ಎರಡನೇ ಆವೃತ್ತಿಯ ಡಬ್ಲ್ಯೂ ಪಿ ಎಲ್ ನಲ್ಲಿ ಆಯ್ಕೆಯಾಗಿದ್ದಕ್ಕೆ ತಮ್ಮ ಸಂತಸ ವ್ಯಕ್ತಪಡಿಸಿದ್ದಾರೆ.
ಅಲ್ಲದೆ ಈ ಹಣದಿಂದ ತಮ್ಮ ಹೆತ್ತವರಿಗೆ ಹೊಸ ಕಾರು ಕೊಡಿಸುವುದಾಗಿ ತಿಳಿಸಿದ ಅವರು, ತಾವು ಆಯ್ಕೆಯಾಗಿರುವ ಕುರಿತು ಅಮ್ಮನಿಗೆ ತಿಳಿಸಲು ವಿಡಿಯೋ ಕರೆ ಮಾಡಬೇಕೆಂದುಕೊಂಡಿದ್ದೆ. ಆದರೆ ಅವರ ಕಣ್ಣಲ್ಲಿ ನೀರಿರುತ್ತದೆ ಎಂಬ ಕಾರಣಕ್ಕೆ ಆಡಿಯೋ ಕಾಲ್ ಮಾಡಿ ಮಾತನಾಡಿದೆ ಎಂದು ಹೇಳಿದ್ದಾರೆ.
https://twitter.com/arjun19dev/status/1733438850268344516?ref_src=twsrc%5Etfw%7Ctwcamp%5Etweetembed%7Ctwterm%5E1733438850268344516%7Ctwgr%5Ee52db806c88ba9aec4792a8c63d891575731d9d2%7Ctwcon%5Es1_&ref_url=https%3A%2F%2Fsportstar.thehindu.com%2Fcricket%2Fwomens-cricket%2Fvrinda-dinesh-wpl-auction-2024-up-warriorz-price-most-expensive-uncapped-player-sold-unsold-record%2Farticle67621386.ece