ವಿಶ್ವಕ್ ಸೇನ್ ಅಭಿನಯದ ರಾಮ್ ನಾರಾಯಣ್ ನಿರ್ದೇಶನದ ಬಹು ನಿರೀಕ್ಷಿತ ‘ಲೈಲಾ’ ಎಂಬ ತೆಲುಗು ಚಿತ್ರ ನಾಳೆ ತೆರೆ ಮೇಲೆ ಬರಲು ಸಿದ್ಧವಾಗಿದೆ. ಈ ಸಿನಿಮಾ ಈಗಾಗಲೇ ತನ್ನ ಟ್ರೈಲರ್ ನಿಂದಲೇ ಭರ್ಜರಿ ಸೌಂಡ್ ಮಾಡಿದ್ದು, ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ.
ವಾಸುದೇವ ಮೂರ್ತಿ ಕಥೆ ಬರೆದಿದ್ದು, ರಾಮ್ ನಾರಾಯಣ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಶೈನ್ ಸ್ಕ್ರೀನ್ ಬ್ಯಾನರ್ ನಲ್ಲಿ ಸಾಹು ಗರಪತಿ ನಿರ್ಮಾಣ ಮಾಡಿದ್ದು, ಸಾಗರ್ ಸಂಕಲನ, ರಿಚರ್ಡ್ ಪ್ರಸಾದ್ ಛಾಯಾಗ್ರಹಣ ಹಾಗೂ ಲಿಯಾನ್ ಜೇಮ್ಸ್ ಅವರ ಸಂಗೀತ ನಿರ್ದೇಶನವಿದೆ.
ವಿಶ್ವಕ್ ಸೇನ್ ಅವರಿಗೆ ಜೋಡಿಯಾಗಿ ಆಕಾಂಕ್ಷ ಶರ್ಮ ಅಭಿನಯಿಸಿದ್ದು, ವೆನ್ನೆಲಾ ಕಿಶೋರ್, ರವಿ ಮಾರಿಯಾ, ನಾಗಿನೀಡು, ಹರ್ಷವರ್ಧನ್, ಬ್ರಹ್ಮಾಜಿ, ಬಬ್ಲೂ ಪೃಥಿವೀರಾಜ್, ರಘು ಬಾಬು, ಅಭಿಮನ್ಯು ಸಿಂಗ್, ವಿನೀತ್ ಕುಮಾರ್, ಉಳಿದ ತಾರಾಂಗಣದಲ್ಲಿದ್ದಾರೆ.