ಭಾರತದಲ್ಲಿನ ಚೀನೀ ರಾಯಭಾರ ಕಚೇರಿಯು ಡಿಸೆಂಬರ್ 22 ರಂದು ವೀಸಾ ಅರ್ಜಿ ವಿಂಡೋವನ್ನು ಪ್ರಾರಂಭಿಸಲಿದೆ.”ಅರ್ಜಿದಾರರು visaforchina.cn/DEL3_EN/qianzh ಗೆ ಭೇಟಿ ನೀಡುವ ಮೂಲಕ ಫಾರ್ಮ್ ಅನ್ನು ಭರ್ತಿ ಮಾಡುವ ಮತ್ತು ದಾಖಲೆಗಳನ್ನ ಆನ್ಲೈನ್ನಲ್ಲಿ ಅಪ್ಲೋಡ್ ಮಾಡಬಹುದಾಗಿದೆ. ಹೆಚ್ಚಿನ ವಿವರಗಳಿಗಾಗಿ ಈ ವೆಬ್ಸೈಟ್ಗೆ ಭೇಟಿ ನೀಡಲು ಸ್ವಾಗತ” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಹೊಸ ವೇದಿಕೆಯು ಅರ್ಜಿದಾರರಿಗೆ ಗೊತ್ತುಪಡಿಸಿದ ವೆಬ್ಸೈಟ್ಗೆ ಭೇಟಿ ನೀಡುವ ಮೂಲಕ ವೀಸಾ ಫಾರ್ಮ್ಗಳನ್ನು ಅನುಕೂಲಕರವಾಗಿ ಭರ್ತಿ ಮಾಡಲು ಮತ್ತು ಅಗತ್ಯ ದಾಖಲೆಗಳನ್ನು ಆನ್ಲೈನ್ನಲ್ಲಿ ಅಪ್ಲೋಡ್ ಮಾಡಲು ಅನುವು ಮಾಡಿಕೊಡುತ್ತದೆ. ಭಾರತದಲ್ಲಿರುವ ಚೀನಾ ರಾಯಭಾರಿ ಕ್ಸು ಫೀಹಾಂಗ್ ಸೋಮವಾರ X ನಲ್ಲಿ ನವೀಕರಣವನ್ನು ಹಂಚಿಕೊಂಡಿದ್ದಾರೆ.

