ವಿರಾಟ್ ಕೊಹ್ಲಿ ಹೊಸ ಟ್ಯಾಟೋದ ಅರ್ಥ ತಿಳಿಸಿದ ಕಲಾವಿದ

ಟೀಂ ಇಂಡಿಯಾ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿಯವರ ಟ್ಯಾಟೋ ಗೀಳು ಕ್ರಿಕೆಟ್ ಅಭಿಮಾನಿಗಳಿಗೆ ಚೆನ್ನಾಗಿ ತಿಳಿದಿರುವ ಸಂಗತಿ.

2023ರ ಐಪಿಎಲ್ ಸೀಸನ್‌ಗೂ ಮುನ್ನ ಹೊಸ ಟ್ಯಾಟೂ ಹಾಕಿಸಿಕೊಂಡಿದ್ದಾರೆ ವಿರಾಟ್ ಕೊಹ್ಲಿ. ಕೊಹ್ಲಿರ ಹೊಸ ಟ್ಯಾಟೂ ಏನನ್ನು ಅರ್ಥೈಸುತ್ತದೆ ಎಂದು ಅವರ ಟ್ಯಾಟೂ ಕಲಾವಿದ ಸನ್ನಿ ಭಾನುಶಾಲಿ ವಿವರಿಸಿದ್ದಾರೆ.

ಏಲಿಯನ್ಸ್ ಟ್ಯಾಟೂ ಸಂಸ್ಥೆಯಲ್ಲಿ ಹೊಸ ಹಚ್ಚೆ ಹಾಕಿಸಿಕೊಂಡಿರುವ ವಿರಾಟ್, ತಮ್ಮ ಬ್ಯುಸಿ ದಿನಚರಿಯ ಕಾರಣ ಈ ಹೊಸ ಹಚ್ಚೆಯ ಅರ್ಧ ಭಾಗವನ್ನು ಮುಂಬಯಿ ಹಾಗೂ ಇನ್ನರ್ಧ ಭಾಗವನ್ನು ಬೆಂಗಳೂರಿನಲ್ಲಿ ಹಾಕಿಸಿಕೊಂಡಿದ್ದಾರೆ.

“ಕೊಹ್ಲಿರ ಹೊಸ ಹಚ್ಚೆಯು ಅವರ ಆಧ್ಯಾತ್ಮಿಕತೆಯನ್ನು ಪ್ರತಿಫಲಿಸುತ್ತದೆ. ಸೃಷ್ಟಿಯ ಮೂಲ ಹಾಗೂ ಎಲ್ಲ ವಸ್ತುಗಳ ನಡುವಿನ ಸಂಪರ್ಕವನ್ನು ಸೂಚಿಸುವ ಈ ಹಚ್ಚೆ, ಏಕತೆ ಹಾಗೂ ಜೀವನದ ರಚನೆಯನ್ನು ಸಹ ಪ್ರತಿನಿಧಿಸುತ್ತದೆ,” ಎಂದು ಭಾನುಶಾಲಿ ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read