ಐಪಿಎಲ್ ನಲ್ಲಿ 6ನೇ ಶತಕ ಸಿಡಿಸಿದ ಕೊಹ್ಲಿ: ಟಿ20ಯಲ್ಲಿ ದಾಖಲೆ

ಹೈದರಾಬಾದ್: ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಆರ್‌ಸಿಬಿ ಎಂಟು ವಿಕೆಟ್ ಗಳ ಭರ್ಜರಿ ಜಯ ದಾಖಲಿಸಿದೆ. ಆರ್ಸಿಬಿ ಆಟಗಾರ ವಿರಾಟ್ ಕೊಹ್ಲಿ 62 ಎಸೆತಗಳಲ್ಲಿ ಶತಕ ಗಳಿಸಿದ್ದಾರೆ. 63 ಎಸೆತದಲ್ಲಿ 12 ಬೌಂಡರಿ, 4 ಸಿಕ್ಸರ್ ಸಿಡಿಸಿ ಔಟ್ ಆದ ಕೊಹ್ಲಿ ಟಿ20 ಕ್ರಿಕೆಟ್ ನಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದ್ದಾರೆ.

ಐಪಿಎಲ್ ನಲ್ಲಿ 6, ಅಂತರರಾಷ್ಟ್ರೀಯ ಟಿ20 ಯಲ್ಲಿ ಒಂದು ಶತಕ ಬಾರಿಸಿದ್ದಾರೆ. ರೋಹಿತ್ ಶರ್ಮಾ ಮತ್ತು ಕೆ.ಎಲ್. ರಾಹುಲ್ ತಲಾ ಆರು ಶತಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.

ವಿರಾಟ್ ಕೊಹ್ಲಿ ಐಪಿಎಲ್ ನಲ್ಲಿ 6ನೇ ಶತಕ ಬಾರಿಸಿದ್ದು ಅತಿ ಹೆಚ್ಚು ಶತಕ ದಾಖಲಿಸಿದ ಆಟಗಾರರ ಪಟ್ಟಿಯಲ್ಲಿ ಕ್ರಿಸ್ ಗೇಲ್ ಜೊತೆಗೆ ಜಂಟಿಯಾಗಿ ಮೊದಲ ಸ್ಥಾನ ಹಂಚಿಕೊಂಡಿದ್ದಾರೆ.

2016ರಲ್ಲಿ ನಾಲ್ಕು ಶತಕ ಸಿಡಿಸಿದ್ದ ಕೊಹ್ಲಿ 2019ರಲ್ಲಿ ಒಂದು ಶತಕ, ಈ ಸಲ ಮತ್ತೊಂದು ಶತಕ ದಾಖಲಿಸಿದ್ದಾರೆ. 2018ರ ನಂತರ ವಿರಾಟ್ ಕೊಹ್ಲಿ ಐಪಿಎಲ್ ಆವೃತ್ತಿ ಒಂದರಲ್ಲಿ 500ಕ್ಕೂ ಹೆಚ್ಚು ರನ್ ದಾಖಲಿಸಿದ್ದಾರೆ. ಈ ಬಾರಿ 13 ಪಂದ್ಯಗಳಲ್ಲಿ 538 ಕಲೆ ಹಾಕಿದ್ದಾರೆ.

ಐಪಿಎಲ್ ಆವೃತ್ತಿ ಒಂದರಲ್ಲಿ ಇದೇ ಮೊದಲ ಬಾರಿಗೆ ಐವರು ಭಾರತೀಯರು ಶತಕ ಬಾರಿಸಿದ್ದಾರೆ. ವೆಂಕಟೇಶ್ ಅಯ್ಯರ್, ಯಶಸ್ವಿ ಜೈಸ್ವಾಲ್, ಸೂರ್ಯಕುಮಾರ್ ಪ್ರಭ್ ಸಿಮ್ರನ್, ಕೊಹ್ಲಿ ಶತಕ ಬಾರಿಸಿದವರು.

ವಿರಾಟ್ ಕೊಹ್ಲಿ ಮೂರನೇ ಬಾರಿಗೆ ಸಿಕ್ಸರ್ ನೊಂದಿಗೆ ಐಪಿಎಲ್ ಶತಕ ಪೂರೈಸಿದ್ದು ದಾಖಲೆಯಾಗಿದೆ. ಆಮ್ಲ ಎರಡು ಬಾರಿ ಈ ಸಾಧನೆ ಮಾಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read