ನಿನ್ನೆಯ ಪಂದ್ಯದಲ್ಲಿ ಈ ದಾಖಲೆಗೆ ಭಾಜನರಾಗಿದ್ದಾರೆ ವಿರಾಟ್ ಕೊಹ್ಲಿ

ನಿನ್ನೆಯ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಆರ್ಸಿಬಿ ಎದುರು ನಾಲ್ಕು ವಿಕೆಟ್ ಗಳಿಂದ ಭರ್ಜರಿ ಜಯ ಸಾಧಿಸಿದ್ದು, ಕ್ವಾಲಿಫೈಯರ್ 2 ಗೆ ಎಂಟ್ರಿ ಕೊಟ್ಟಿದೆ.

ಈ ಮೂಲಕ ಆರ್‌ಸಿಬಿ ತಂಡ ಮತ್ತೊಮ್ಮೆ ಟ್ರೋಲ್  ಗೀಡಾಗಿದೆ. ಇಂದು ಕ್ವಾಲಿಫೈಯರ್ 2 ನಲ್ಲಿ ರಾಜಸ್ಥಾನ ರಾಯಲ್ಸ್ ಮತ್ತು ಹೈದರಾಬಾದ್ ತಂಡ ಮುಖಮುಖಿಯಾಗಲಿದ್ದು, ಗೆದ್ದ ತಂಡ ಫೈನಲ್  ನಲ್ಲಿ ಕೆಕೆಆರ್ ತಂಡವನ್ನು ಎದುರಿಸಲಿದೆ.

ಪಂದ್ಯದ ಸೋಲಿನಲ್ಲೂ ವಿರಾಟ್ ಕೊಹ್ಲಿ ಈ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಐಪಿಎಲ್ ನಲ್ಲಿ  8000 ರನ್ ಪೂರೈಸಿದ ಮೊದಲ ಬ್ಯಾಟ್ಸ್ಮ್ಯಾನ್ ಎಂಬ ದಾಖಲೆ ಬರೆದಿದ್ದಾರೆ. ವಿರಾಟ್ ಕೊಹ್ಲಿ ಐಪಿಎಲ್ ನಲ್ಲಿ ಇದುವರೆಗೂ 252 ಪಂದ್ಯಗಳನಾಡಿದ್ದು, 8004 ರನ್ ಗಳಿಸಿದ್ದಾರೆ. ಇದರಲ್ಲಿ 55 ಅರ್ಧ ಶತಕ ಮತ್ತು ಎಂಟು ಶತಕಗಳಿವೆ.ಐಪಿಎಲ್ ಶುರುವಾದಾಗಿನಿಂದ ಒಂದೇ ತಂಡದಲ್ಲಾಡಿರುವ ಇವರು ದಾಖಲೆಗಳ ಸರದಾರರಾಗಿದ್ದಾರೆ.

https://twitter.com/IPL/status/1793288021258994151?ref_src=twsrc%5Etfw%7Ctwcamp%5Etweetembed%7Ctwterm%5E1793288021258994151%7Ctwgr%5E0c0bc3e2ae7a89116db7e449c165945d6568c8c3%7Ctwcon%5Es1_&

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read