ಅಹಮದಾಬಾದ್: ಗುಜರಾತ್ ನ ಅಹಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ಆಟಗಾರ ವಿರಾಟ್ ಕೊಹ್ಲಿ 54 ರನ್ ಗಳಿಸಿದ್ದಾರೆ.
ಕಳೆದ ಸೆಮಿಫೈನಲ್ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ ಅವರ 673 ರನ್ ದಾಖಲೆ ಮುರಿದ ವಿರಾಟ್ 711 ರನ್ ಕಲೆ ಹಾಕಿದ್ದರು. ಇಂದು 54 ರನ್ ಸೇರಿಸಿ 765 ರನ್ ಕಲೆ ಹಾಕಿದ್ದಾರೆ.
ಪ್ರಸಕ್ತ ವಿಶ್ವಕಪ್ ನಲ್ಲಿ ವಿರಾಟ್ ಕೊಹ್ಲಿ 11 ಇನಿಂಗ್ ಆಡಿದ್ದು, 765 ರನ್ ಗಳಿಸಿದ್ದಾರೆ. ಇದರಲ್ಲಿ 3 ಶತಕ, 6 ಅರ್ಧ ಶತಕ ಸೇರಿವೆ. ವಿಶ್ವಕಪ್ ನ ಒಂದೇ ಆವೃತ್ತಿಯಲ್ಲಿ ಯಾವುದೇ ಆಟಗಾರ ಗಳಿಸಿದ ಅತಿ ಹೆಚ್ಚು ರನ್ ಇದಾಗಿದೆ. ಒಂದೇ ವಿಶ್ವಕಪ್ ನಲ್ಲಿ 765 ರನ್ ಗಳ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ.
ಪ್ರಸಕ್ತ ವಿಶ್ವಕಪ್ ನಲ್ಲಿ 9ನೇ 50 ಪ್ಲಸ್ ಸ್ಕೋರ್ ಇದಾಗಿದೆ. ಏಕದಿನದಲ್ಲಿ 72ನೇ ಅರ್ಧಶತಕ ಇದಾಗಿದೆ.
9⃣th FIFTY-plus score in #CWC23! 👏 👏
7⃣2⃣nd FIFTY in ODIs! 👌 👌
Virat Kohli continues his impressive run of form as #TeamIndia move past 130 in the #Final.
Follow the match ▶️ https://t.co/uVJ2k8mWSt#MenInBlue | #INDvAUS pic.twitter.com/TMYYiJNeja
— BCCI (@BCCI) November 19, 2023