ಚಲಿಸುತ್ತಿದ್ದ ರೈಲಿನ ಮುಂದೆ ‘ಮಾರ್ನಿಂಗ್’ ವಾಕ್……ವೈರಲ್ ವಿಡಿಯೋ ನೋಡಿದ್ರೆ ಶಾಕ್ ಆಗ್ತೀರಾ….!

ಹಿಂದೆ ರೈಲು ಬರ್ತಿದ್ದರೆ ಮುಂದೆ ವ್ಯಕ್ತಿಯೊಬ್ಬ ನಡೆದುಕೊಂಡು ಹೋಗ್ತಿದ್ದಾನೆ. ಎಷ್ಟೇ ಹಾರ್ನ್‌ ಹೊಡೆದ್ರೂ ವ್ಯಕ್ತಿಗೆ ಅದು ಕೇಳಿಸ್ತಿಲ್ಲ. ರೈಲಿನಿಂದ ಇಳಿದ ವ್ಯಕ್ತಿಯೊಬ್ಬ ರೈಲು ಹಳಿ ಮೇಲೆ ನಡೆದುಕೊಂಡು ಹೋಗ್ತಿದ್ದ ವ್ಯಕ್ತಿಯನ್ನು ಪಕ್ಕಕ್ಕೆ ಎಳೆಯುತ್ತಾನೆ. ಅಲ್ಲದೇ ಕೋಪದಲ್ಲಿ ಆತನಿಗೆ ಎರಡೇಟು ನೀಡ್ತಾನೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಘರ್‌ ಕೇ ಕಾಲೇಶ್‌ ಹೆಸರಿನ ಎಕ್ಸ್‌ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಚಲಿಸುತ್ತಿರುವ ಟ್ರೈನ್‌ ಮುಂದೆ ಮಾರ್ನಿಂಗ್‌ ವಾಕ್‌ ಅಂತ ಇದಕ್ಕೆ ಶೀರ್ಷಿಕೆ ನೀಡಲಾಗಿದೆ. ಈ ವಿಡಿಯೋ ಎಲ್ಲಿಯದ್ದು ಎಂಬುದು ಇನ್ನೂ ಪತ್ತೆಯಾಗಿಲ್ಲ. ಆದ್ರೆ ಸಾಮಾಜಿಕ ಜಾಲತಾಣದಲ್ಲಿ ವೇಗವಾಗಿ ವೈರಲ್‌ ಆಗಿದೆ. 32 ಸಾವಿರಕ್ಕೂ ಹೆಚ್ಚು ಬಾರಿ ವೀಕ್ಷಣೆ ಮಾಡಲಾಗಿದೆ. ವಾಕ್‌ ಮಾಡ್ತಿದ್ದ ವ್ಯಕ್ತಿ ಕಿವಿಗೆ ಇಯರ್‌ ಫೋನ್‌ ಹಾಕಿಕೊಂಡಿದ್ದ. ಹಾಗಾಗಿ ಆತನಿಗೆ ಹಾರ್ನ್‌ ಕೇಳ್ತಿರಲಿಲ್ಲ ಎನ್ನಲಾಗ್ತಿದೆ.

ಬಳಕೆದಾರರು ವ್ಯಕ್ತಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಮುಂದಿನ ಬಾರಿ ಇಂಥ ವ್ಯಕ್ತಿಗಳನ್ನು ರಕ್ಷಿಸುವ ಅಗತ್ಯವಿಲ್ಲ ಅಂತ ಅನೇಕರು ಹೇಳಿದ್ದಾರೆ.

https://twitter.com/gharkekalesh/status/1812796982093660364?ref_src=twsrc%5Etfw%7Ctwcamp%5Etweetembed%7Ctwterm%5E1812796982093660364%7Ctwgr%5Ebd3da1e8319300a037e5af84d776f71efbd91be8%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fenglish%2Fdnpindia-epaper-dh32aa52fd1e564d7ab912b538d71eaab2%2Fviralvideocarelessnessmanwalksontracksinfrontofmovingtrainbizarreactsparksoutragewatch-newsid-n622174419

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read