ಕಾರ್ಯಕ್ರಮವೊಂದರಲ್ಲಿ ಮಹಿಳಾ ಸರ್ ಪಂಚ್ ನ ಇಂಗ್ಲಿಷ್ ಭಾಷಣಕ್ಕೆ ಜಿಲ್ಲಾಧಿಕಾರಿ ಬೆರಗಾಗಿದ್ದು ಮಹಿಳೆಯ ಭಾಷಣಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಐಎಎಸ್ ಅಧಿಕಾರಿ ಟೀನಾ ದಾಬಿ ಮಹಿಳಾ ಸರಪಂಚ್ ಭಾಷಣಕ್ಕೆ ನೀಡಿದ ಪ್ರತಿಕ್ರಿಯೆ ವೈರಲ್ ಆದ ನಂತರ ಮತ್ತೊಮ್ಮೆ ವಿಡಿಯೋ ಗಮನ ಸೆಳೆದಿದೆ. ರಾಜಸ್ಥಾನದ ಬಾರ್ಮರ್‌ನಲ್ಲಿ ನಡೆದ ಸಮಾರಂಭದಲ್ಲಿ ಮಹಿಳಾ ಸರ್ ಪಂಚ್ ನ ನಿರರ್ಗಳ ಇಂಗ್ಲಿಷ್ ಭಾಷಣ ವೇದಿಕೆಯಲ್ಲಿದ್ದ ಅಧಿಕಾರಿಗಳನ್ನು ಆಶ್ಚರ್ಯಚಕಿತಗೊಳಿಸಿತು. ಮಹಿಳೆಯನ್ನು ವೇದಿಕೆಗೆ ಗೌರವಾನ್ವಿತ ಅತಿಥಿಯಾಗಿ ಆಹ್ವಾನಿಸಲಾಗಿತ್ತು ಎಂಬ ವರದಿಗಳಿವೆ.
ರಾಜಸ್ಥಾನಿ ಸಾಂಪ್ರದಾಯಿಕ ಉಡುಗೆ ತೊಟ್ಟಿದ್ದ ಸರಪಂಚ್ ಸೋನು ಕನ್ವರ್ ವೇದಿಕೆಯ ಮೇಲೆ ನಿಂತು ಜಿಲ್ಲಾಧಿಕಾರಿಯನ್ನು ಸ್ವಾಗತಿಸಿದ ವಿಡಿಯೋ ವೈರಲ್ ಆಗಿದೆ.
“ಇಂದಿನ ಕಾರ್ಯಕ್ರಮದ ಭಾಗವಾಗಿರುವುದಕ್ಕೆ ನನಗೆ ಸಂತೋಷವಾಗಿದೆ. ಮೊದಲನೆಯದಾಗಿ, ನಮ್ಮ ಕಲೆಕ್ಟರ್ ಟೀನಾ ಮೇಡಮ್ ಅವರನ್ನು ನಾನು ಸ್ವಾಗತಿಸುತ್ತೇನೆ. ಮಹಿಳೆಯಾಗಿ ಟೀನಾ ಮೇಡಮ್ ಅವರನ್ನು ಸ್ವಾಗತಿಸುವುದು ಗೌರವ” ಎಂದು ಆಕೆ ಇಂಗ್ಲಿಷ್ ನಲ್ಲಿ ಹೇಳಿದ್ದಾರೆ. ಜಲ ಸಂರಕ್ಷಣೆಯ ಬಗ್ಗೆ ಮಾತನಾಡಿದ ಮಹಿಳೆಯ ಭಾಷಣವು ಪ್ರೇಕ್ಷಕರು ಜೋರಾಗಿ ಚಪ್ಪಾಳೆ ನೀಡಿದರೆ, ಐಎಎಸ್ ಅಧಿಕಾರಿ ಟೀನಾ ದಾಬಿ ನಿಜಕ್ಕೂ ಬೆರಗಾದರು.
https://twitter.com/KailashSodha_94/status/1834977288288600137?ref_src=twsrc%5Etfw%7Ctwcamp%5Etweetembed%7Ctwterm%5E1834977288288600137%7Ctwgr%5E05e9d044768a11535a4f5bbf20e153717