Viral Video: ಮಾನವೀಯತೆಗೆ ಸಿಕ್ಕ ಕೊಡುಗೆ; ಭಾರಿ ಗಿಫ್ಟ್ ನೋಡಿ ಭಾವುಕನಾದ ಶೂ ಪಾಲೀಶ್ ಮಾಡುತ್ತಿದ್ದ ವ್ಯಕ್ತಿ

ಪ್ರಪಂಚದಲ್ಲಿ ದಯೆ, ಮಾನವೀಯತೆ, ಸಹಾಯ ಮಾಡಬೇಕೆನ್ನುವ ಮನೋಭಾವ ಬರಬರುತ್ತಾ ಅದೆಷ್ಟು ಕ್ಷೀಣಿಸಿದೆ ಎಂದರೆ ಹಣವಿದ್ದರೆ ಮಾತ್ರ ಎಲ್ಲದಕ್ಕೂ ಬೆಲೆ ಎಂಬಷ್ಟರ ಮಟ್ಟಿಗೆ ಸ್ವಾರ್ಥಿಗಳಾಗಿದ್ದೇವೆ… ದುಡ್ಡಿಲ್ಲ ಎಂದರೆ ಮೂಗು ಮುರಿಯುವವರೇ ಹೆಚ್ಚು… ಹಣವಿಲ್ಲ ಎಂದರೆ ಸಹಾಯಕ್ಕೆ ಬರುವವರೂ ವಿರಳ ಈ ಪ್ರಪಂಚದಲ್ಲಿ ಎಂಬಂತಾಗಿದೆ…. ಇಂತಹ ಸಂದರ್ಭದಲ್ಲಿ ಇಲ್ಲೋರ್ವ ವ್ಯಕ್ತಿ ಮಾನವೀಯತೆ ಪರೀಕ್ಷೆ ಮಾಡಲು ಶೂ ಹಿಡಿದು ಪಾಲೀಶ್ ಮಾಡಿಕೊಡಿ ಎನ್ನುತ್ತಾ ಹೊರಟಿದ್ದಾನೆ.

ಶೂ ಪಾಲೀಶ್ ಮಾಡುವವರ ಬಳಿ ತೆರಳಿ ಸ್ವಲ್ಪ ನನ್ನ ಬೂಟ್ ಪಾಲೀಶ್ ಮಾಡಿ ಕೊಡಬೇಕಿತ್ತು. ಆದರೆ ನನ್ನ ಬಳಿ ಹಣವಿಲ್ಲ ಎನ್ನುತ್ತ ಬೂಟ್ ನೀಡಿದ್ದಾನೆ. ಹಣವಿಲ್ಲ ಎನ್ನುತ್ತಿದ್ದಂತೆ ಬೂಟ್ ವಾಪಸ್ ನೀಡಿ ಆತನನ್ನು ಕಳುಹಿಸಿದ್ದಾರೆ. ಯಾವ ಚಮ್ಮಾರನೂ ಬೂಟ್ ಪಾಲೀಶ್ ಗೆ ಒಪ್ಪಲಿಲ್ಲ.

ಆದರೆ ವ್ಯಕ್ತಿ, ಹಣವಿಲ್ಲವೆಂದರೂ ಯಾರು ಬೂಟ್ ಪಾಲೀಶ್ ಮಾಡಿಕೊಡುತ್ತಾರೋ ಅವರಿಗೆ ಗೌಪ್ಯವಾಗಿ ಭಾರಿ ಗಿಫ್ಟ್ ಒಂದನ್ನು ಇಟ್ಟುಕೊಂಡು ತೆರಳಿದ್ದ. ಕಂತೆ ಕಂತೆ ಹಣವನ್ನು ಗಿಫ್ಟ್ ಆಗಿ ಮೀಸಲಿಟ್ಟಿದ್ದ. ಮೂರ್ನಾಲ್ಕು ಚಮ್ಮಾರರ ಬಳಿ ಹೋದರೂ ಯಾರೊಬ್ಬರೂ ಫ್ರೀಯಾಗಿ ಬೂಟ್ ಪಾಲೀಶ್ ಮಾಡಲು ಒಪ್ಪಿಲ್ಲ. ದುಡ್ದಿಲ್ಲ ಎಂದ ತಕ್ಷಣ ಕೆಲವರು ಬೈದು ಕಳುಹಿಸಿದ್ದಾರೆ. ಆದರೆ ಒಬ್ಬ ಚಮ್ಮಾರ ಮಾತ್ರ ಹಣವಿಲ್ಲ ಎಂದರೂ ವ್ಯಕ್ತಿಯ ಬೂಟ್ ಪಾಲೀಶ್ ಮಾಡಿಕೊಡಲು ಒಪ್ಪಿ ಬೂಟ್ ಪಾಲೀಶ್ ಮಾಡಿಕೊಟ್ಟು ಮಾನವೀಯತೆ ಮೆರೆದಿದ್ದಾನೆ. ಆತನ ಮಾನವೀಯತೆ ಕಂಡು ವ್ಯಕ್ತಿ ಭಾರಿ ಗಿಫ್ಟ್ ನೀಡಿದ್ದಾನೆ. ವ್ಯಕ್ತಿ ನೀಡಿದ ಹಣದ ಕಂತೆ ಕಂಡು ಅಚ್ಚರಿಯಾದ ಚಮ್ಮಾರ, ಈವರೆಗೂ ಗಳಿಸದೇ ಇರುವಷ್ಟು ಹಣವನ್ನು ಕಂಡು ಭಾವುಕನಾಗಿದ್ದಾನೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಭಾರಿ ವೈರಲ್ ಆಗಿದೆ.

ಮಾನವೀಯತೆಯಿಂದ ಇರುವವರಿಗೆ ಹಣ ತಾನೇ ಹಿಂಬಾಲಿಸುತ್ತದೆ ಎಂಬ ನೀತಿ ಪಾಠವನ್ನು ಈ ವಿಡಿಯೋ ಮೂಲಕ ಹೇಳಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read