ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೋದಲ್ಲಿ ಎಐ ರೋಬೋಟ್‌ನಿಂದ ಮಹಿಳೆಯೊಬ್ಬರು ಬ್ಯಾಗ್ ಕದ್ದಿದ್ದಾರೆ. ಕೆಂಪು ಬಣ್ಣದ ಬ್ಯಾಗ್ ಹಿಡಿದುಕೊಂಡು ನಿಂತಿದ್ದ ಎಐ ರೋಬೋಟ್‌ನ ಹಿಂಭಾಗದಿಂದ ಮಹಿಳೆಯೊಬ್ಬರು ಬಂದು ಬ್ಯಾಗ್ ಕದಿಯುತ್ತಾರೆ.
ತನ್ನ ಬ್ಯಾಗ್‌ಗಾಗಿ ತಡಕಾಡಿದ ರೋಬೋಟ್, ಗೊಂದಲದಿಂದ ಸುತ್ತಲೂ ನೋಡುತ್ತದೆ. ಸಹಾಯಕ್ಕಾಗಿ ಮಹಿಳೆಯ ಕಡೆಗೆ ಆಶಾಭಾವದಿಂದ ನೋಡುತ್ತದೆ. ಈ ವಿಡಿಯೋ AI ತಂತ್ರಜ್ಞಾನದಿಂದ ತಯಾರಿಸಲ್ಪಟ್ಟಿದೆ.
ಈ ವಿಡಿಯೋವನ್ನು ‘Random Indian’ ಎಂಬ ಇನ್‌ಸ್ಟಾಗ್ರಾಮ್ ಪುಟದಲ್ಲಿ ಎರಡು ದಿನಗಳ ಹಿಂದೆ ಹಂಚಿಕೊಳ್ಳಲಾಗಿದೆ. ಈ ವೀಡಿಯೊವನ್ನು 11 ಮಿಲಿಯನ್‌ಗಿಂತಲೂ ಹೆಚ್ಚು ಜನರು ವೀಕ್ಷಿಸಿದ್ದಾರೆ.
ಈ ವೈರಲ್ ವಿಡಿಯೋ ಸಾಮಾಜಿಕ ಮಾಧ್ಯಮ ಬಳಕೆದಾರರಿಂದ ತಮಾಷೆಯ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿದೆ. “ಕಳ್ಳತನ ಹೊಸ ಟ್ರೆಂಡ್ ಅಥವಾ ಹೊಸ ಕೆಲಸವೇ” ಎಂದು ಬಳಕೆದಾರರೊಬ್ಬರು ಹೇಳಿದ್ದಾರೆ. “ಔಟ್ ಆಫ್ ಸಿಲಬಸ್” ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ. “ಎಐ ಇದಕ್ಕೆ ಸಿದ್ಧವಾಗಿಲ್ಲ” ಎಂದು ಮೂರನೇ ಬಳಕೆದಾರರು ಪ್ರತಿಕ್ರಿಯಿಸಿದರೆ, ನಾಲ್ಕನೇ ಬಳಕೆದಾರರು “ಹ್ಯಾಕರ್ ಡೆವಲಪರ್ ಅನ್ನು ಭೇಟಿಯಾದಾಗ” ಎಂದು ಬರೆದಿದ್ದಾರೆ.
ನೆಟ್ಟಿಗರ ಒಂದು ವಿಭಾಗವು ಎಐನ ಅಪಾಯಕಾರಿ ಬಗ್ಗೆ ಕಾಮೆಂಟ್ ಮಾಡಿದ್ದಾರೆ. “ಎಐ ಮನುಷ್ಯರಿಗೆ ಅಪಾಯಕಾರಿ” ಎಂದು ಒಬ್ಬ ಬಳಕೆದಾರರು ಬರೆದಿದ್ದಾರೆ. “ನಿಮಗೆ ಗೊತ್ತಿಲ್ಲದಿದ್ದರೆ ರೋಬೋಟ್‌ಗಳು ಬ್ಯಾಗ್‌ಗಳನ್ನು ಸ್ಕ್ಯಾನ್ ಮಾಡಬಹುದು” ಎಂದು ಇನ್ನೊಬ್ಬರು ಹೇಳಿದ್ದಾರೆ. “ಎಐ ಎಕ್ಸ್-ರೇ ಬಳಸುತ್ತದೆ” ಎಂದು ಮೂರನೇ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.