ಒತ್ತಡ ನಿವಾರಿಸುತ್ತವೆ ಸಾಕು ಪ್ರಾಣಿ; ಇದಕ್ಕೆ ಈ ವಿಡಿಯೋ ನಿದರ್ಶನ

ಸಾಕು ಪ್ರಾಣಿ ಮಾಲೀಕರು ಮತ್ತು ನಾಯಿಗಳು ವಿಶೇಷ ಬಂಧವನ್ನು ಹಂಚಿಕೊಳ್ಳುತ್ತವೆ. ಅವು ಕೂಡ ಕುಟುಂಬದ ಸದಸ್ಯರಂತೆ ಅಗಿಬಿಡುತ್ತವೆ. ಇದೇ ರೀತಿಯ ನಿದರ್ಶನವನ್ನು ಹಂಚಿಕೊಂಡ ಮಹಿಳೆಯೊಬ್ಬರು ಸಾಕು ನಾಯಿ, ತಮ್ಮ ಶಸ್ತ್ರಚಿಕಿತ್ಸೆಯ ನಂತರ ಚೇತರಿಸಿಕೊಳ್ಳಲು ಹೇಗೆ ಸಹಾಯ ಮಾಡಿದೆ ಎಂದು ಹಂಚಿಕೊಂಡಿದ್ದಾರೆ.

ವಿಡಿಯೋದಲ್ಲಿ, ಮಹಿಳೆ ವಾಕರ್ ಸಹಾಯದಿಂದ ನಡೆಯುತ್ತಿರುವುದನ್ನು ಕಾಣಬಹುದು ಮತ್ತು ಆಕೆಯ ಕಾಲಿನ ಮೇಲೆ ಮೊಣಕಾಲು ಬ್ರೇಸ್ ಅನ್ನು ಕಾಣಬಹುದು. ನಂತರ ಅವರು ನಾಯಿಯೊಂದಿಗೆ ಆಡುವ ತುಣುಕುಗಳನ್ನು ಹಂಚಿಕೊಂಡಿದ್ದಾರೆ. “ನಾಯಿಗಳು ನಿಜವಾಗಿಯೂ ಗುಣಪಡಿಸುವ ಶಕ್ತಿಯನ್ನು ಹೊಂದಿವೆ” ಎಂದು ಮಹಿಳೆ ಹೇಳುತ್ತಾರೆ.

ಸಾಕುಪ್ರಾಣಿಗಳೊಂದಿಗೆ ಸಮಯ ಕಳೆಯುವುದು ತುಂಬಾ ವಿಶೇಷ. ಇದರಿಂದ ಎಂಡಾರ್ಫಿನ್‌ಗಳ ಬಿಡುಗಡೆಯನ್ನು ಉತ್ತೇಜಿಸುತ್ತದೆ, ಇದು ನಮಗೆ ಒತ್ತಡವನ್ನು ಕಡಿಮೆ ಮಾಡಲು ಮತ್ತು ಒಳ್ಳೆಯದನ್ನು ಅನುಭವಿಸಲು ಸಹಾಯ ಮಾಡುತ್ತದೆ. ರಕ್ತದೊತ್ತಡ ಕೂಡ ಕಡಿಮೆ ಆಗುತ್ತದೆ ಎಂದು ಮಹಿಳೆ ಹೇಳಿಕೊಂಡಿದ್ದಾರೆ.

ಒಂದೇ ದಿನದಲ್ಲಿ ಈ ವಿಡಿಯೋ ಎರಡು ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಮತ್ತು 21,000 ಲೈಕ್‌ಗಳನ್ನು ಸಂಗ್ರಹಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read