ಜಾಂಬಿಯಾ-ಜಿಂಬಾಬ್ವೆ ಗಡಿಯಲ್ಲಿ ಧುಮ್ಮಿಕ್ಕುವ ವಿಶ್ವದ ಅತಿದೊಡ್ಡ ಜಲಪಾತ ವಿಕ್ಟೋರಿಯಾ ಜಲಪಾತದ ಅಂಚಿನಲ್ಲಿ ಧೈರ್ಯವಾಗಿ ಬಂಡೆಯನ್ನು ಹಿಡಿದು ಮಹಿಳಾ ಪ್ರವಾಸಿಗರೊಬ್ಬರು ನೀರಿನಲ್ಲಿ ಅಲುಗಾಡುತ್ತಿರುವುದನ್ನು ತೋರಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಮತ್ತೆ ಕಾಣಿಸಿಕೊಂಡಿದೆ.
ಅತ್ಯಂತ ಧೈರ್ಯದ ಯತ್ನ ಎಂದು ಕರೆಸಿಕೊಳ್ಳುವ ಈ ಚಟುವಟಿಕೆಯು ಜನಪ್ರಿಯ ಮತ್ತು ಅಪಾಯಕಾರಿ ಪ್ರವಾಸಿ ಆಕರ್ಷಣೆಯಾಗಿದೆ. ನೇಚರ್ ಈಸ್ ಅಮೇಜಿಂಗ್ ಎಂಬ ಟ್ವಿಟರ್ ಖಾತೆಯಲ್ಲಿ ಈ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ಡೆವಿಲ್ ಪೂಲ್ ಎಂದು ಕರೆಸಿಕೊಳ್ಳುವ ಈ ಜಲಪಾತ 380ಅಡಿ ಎತ್ತರದಲ್ಲಿದೆ.
ವೀಡಿಯೊ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡ ಬಳಿಕ ಹಲವು ನೆಟ್ಟಿಗರು ನಿಜಕ್ಕೂ ಭಯ ಹುಟ್ಟಿಸಿದೆ ಎಂದಿದ್ದಾರೆ. ಮಹಿಳೆ ನಿಜಕ್ಕೂ ನಡುಗುತ್ತಿರಬಹುದು, ಆದರೆ ಇದನ್ನು ಕ್ಯಾಮೆರಾ ತೋರಿಸಿಲ್ಲ ಎಂದಿದ್ದಾರೆ. ಇಂತಹ ಪ್ರವಾಸಿ ಚಟುವಟಿಕೆಗಳ ಅಪಾಯಗಳು ಮತ್ತು ರೋಚಕತೆಗಳ ಬಗ್ಗೆಯೂ ಚರ್ಚೆಯನ್ನು ಹುಟ್ಟುಹಾಕಿದೆ.
Just learned that standing this close to a 380 feet waterfall is a thing (Devil's pool – Victoria falls ) pic.twitter.com/Y5PVQVwxzk
— Nature is Amazing ☘️ (@AMAZlNGNATURE) May 25, 2024