ಅಂಗಡಿಯೊಂದರ ಸಿಸಿ ಟಿವಿ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕೆಂಪು ಬಟ್ಟೆ ಧರಿಸಿದ್ದ ಮಹಿಳೆಯೊಬ್ಬಳು ದಂಪತಿಗಳ ಬಳಿ ಹೋಗಿ ಪುರುಷನ ಗುಪ್ತಾಂಗವನ್ನು ಸ್ಪರ್ಶಿಸಿದ್ದಾಳೆ. ಈ ಅನಿರೀಕ್ಷಿತ ಘಟನೆಯಿಂದ ದಂಪತಿಗಳು ಕ್ಷಣಕಾಲ ದಂಗಾಗಿ ನಿಂತಿದ್ದು, ನಂತರ ನಡೆದ ಬೆಳವಣಿಗೆಗಳು ಅಚ್ಚರಿ ಮೂಡಿಸಿವೆ.
‘ಎಕ್ಸ್’ (ಹಿಂದೆ ಟ್ವಿಟರ್) ನಲ್ಲಿ ಈ ವಿಡಿಯೋ ವೈರಲ್ ಆಗಿದ್ದು, ಕೆಲವೇ ಗಂಟೆಗಳಲ್ಲಿ ಸಾವಿರಾರು ವೀಕ್ಷಣೆಗಳನ್ನು ಪಡೆದುಕೊಂಡಿದೆ. ವಿಡಿಯೋದಲ್ಲಿ ಕೆಂಪು ಬಟ್ಟೆ ಧರಿಸಿದ ಮಹಿಳೆಯೊಬ್ಬಳು ಅಂಗಡಿಯಿಂದ ಹೊರಬರುತ್ತಿರುವುದು ಕಾಣಿಸುತ್ತದೆ. ನಿರ್ಗಮನ ದ್ವಾರದ ಬಳಿ ನಿಂತಿದ್ದ ದಂಪತಿಗಳ ಪಕ್ಕ ಹಾದು ಹೋಗುವಾಗ, ಆಕೆ ದಿಢೀರನೆ ಆ ವ್ಯಕ್ತಿಯ ಗುಪ್ತಾಂಗವನ್ನು ಸ್ಪರ್ಶಿಸುತ್ತಾಳೆ. ಇದನ್ನು ನೋಡಿದ ಆ ವ್ಯಕ್ತಿಯ ಪತ್ನಿ ಕ್ಷಣಕಾಲ ಏನು ನಡೆಯಿತೆಂದು ತಿಳಿಯದೆ ದಂಗಾಗುತ್ತಾಳೆ.
‘ಐ ಪೋಸ್ಟ್ ಫಾರ್ಬಿಡನ್ ವಿಡಿಯೋಸ್’ ಎಂಬ ಖಾತೆಯಿಂದ ಈ ವಿಡಿಯೋವನ್ನು ಎಕ್ಸ್‌ನಲ್ಲಿ ಹಂಚಿಕೊಳ್ಳಲಾಗಿದೆ. ಕಣ್ಣು ಮಿಟುಕಿಸುವಷ್ಟರಲ್ಲಿ ಆ ವ್ಯಕ್ತಿಯ ಪತ್ನಿ ಕೆಂಪು ಬಟ್ಟೆ ಧರಿಸಿದ ಮಹಿಳೆಯ ಕೆನ್ನೆಗೆ ಜೋರಾಗಿ ಹೊಡೆಯುತ್ತಾಳೆ, ಆಕೆ ನೆಲಕ್ಕೆ ಬೀಳುತ್ತಾಳೆ. ನಂತರ ನಡೆಯುವ ದೃಶ್ಯಗಳು ಗೊಂದಲಮಯವಾಗಿವೆ. ಕೋಪಗೊಂಡ ಪತ್ನಿ ತನ್ನ ಗಂಡನ ಕಡೆ ತಿರುಗಿ ಅವನಿಗೂ ಒಂದು ಏಟು ನೀಡುತ್ತಾಳೆ. ಬಹುಶಃ ಆತ ತಕ್ಷಣಕ್ಕೆ ಪ್ರತಿಕ್ರಿಯಿಸದಿದ್ದಕ್ಕೆ ಅಥವಾ ಕೋಪಗೊಳ್ಳುವ ಬದಲು ದಂಗಾಗಿ ನಿಂತಿದ್ದಕ್ಕೆ ಆಕೆ ಹೀಗೆ ಮಾಡಿರಬಹುದು.
ಕೆಂಪು ಬಟ್ಟೆ ಧರಿಸಿದ ಮಹಿಳೆ ಪಕ್ಕದಲ್ಲಿದ್ದ ವ್ಯಕ್ತಿಯ ಸಹಾಯದಿಂದ ಏಳಲು ಪ್ರಯತ್ನಿಸುತ್ತಿರುವಾಗ, ಕೋಪಿತ ಪತ್ನಿ ಮತ್ತೆ ಆಕೆಯ ಮೇಲೆ ಎರಗುತ್ತಾಳೆ ಮತ್ತು ಇನ್ನೊಂದು ಜೋರಾದ ಏಟು ನೀಡುತ್ತಾಳೆ. ಈ ದೃಶ್ಯ ಸೀರಿಯಲ್‌ನಂತಿದ್ದು, ಗೊಂದಲ ಮತ್ತು ಜನರ ಪ್ರತಿಕ್ರಿಯೆಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.
ಎಕ್ಸ್‌ನಲ್ಲಿ ಬಳಕೆದಾರರು ಈ ಘಟನೆಯ ಬಗ್ಗೆ ವಿಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಕೆಲವರು ಪತ್ನಿ ಸುಮ್ಮನೆ ನೋಡಿಕೊಳ್ಳದೆ ಪ್ರತಿಕ್ರಿಯಿಸಿದ್ದಕ್ಕಾಗಿ ಹೊಗಳಿದರೆ, ಇತರರು ತನ್ನ ಗಂಡನಿಗೆ ಹೊಡೆದಿದ್ದಕ್ಕಾಗಿ ಟೀಕಿಸಿದ್ದಾರೆ. ಏನೇ ಇರಲಿ, ಈ ಘಟನೆ ಮಾತ್ರ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯ ವಿಷಯವಾಗಿದೆ.
Woman grabs a guy by the nuts and his wife loses it pic.twitter.com/WouWe1dDOh
— I Post Forbidden Videos (@WorldDarkWeb2) April 9, 2025