Viral Video | ಡೊನಾಲ್ಡ್ ಟ್ರಂಪ್ ಗೆಲುವಿನ ಬಳಿಕ ಕಣ್ಣೀರಿಟ್ಟ ʼಎಡ ಪಂಥೀಯರುʼ

ಅಮೆರಿಕಾದ ನೂತನ ಅಧ್ಯಕ್ಷರಾಗಿ ಡೋನಾಲ್ಡ್‌ ಟ್ರಂಪ್‌ ಎರಡನೇ ಬಾರಿಗೆ ಆಯ್ಕೆಯಾಗಿದ್ದಾರೆ. ಅವರು ತಮ್ಮ ಎದುರಾಳಿ ಕಮಲಾ ಹ್ಯಾರಿಸ್‌ ಅವರನ್ನು ಪರಾಭವಗೊಳಿಸಿ ಮತ್ತೊಮ್ಮೆ ಶ್ವೇತ ಭವನ ಪ್ರವೇಶಿಸುತ್ತಿದ್ದಾರೆ.

ಇದರ ಮಧ್ಯೆ ಬಲಪಂಥೀಯರಾದ ಡೋನಾಲ್ಡ್‌ ಟ್ರಂಪ್‌ ಅವರ ಗೆಲುವು ಎಡ ಪಂಥೀಯರನ್ನು ತೀವ್ರ ನಿರಾಸೆಗೊಳಿಸಿದೆ. ಅವರುಗಳು ತಮ್ಮ ನೋವನ್ನು ಕಣ್ಣೀರಿಡುತ್ತಾ ಹೊರ ಹಾಕಿರುವ ವಿಡಿಯೋವನ್ನು ಟ್ರಂಪ್‌ ಅಭಿಮಾನಿಗಳು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದು, ಅವು ಈಗ ವೈರಲ್‌ ಆಗಿವೆ.

ಯುಎಸ್ ಚುನಾವಣಾ ಫಲಿತಾಂಶಗಳು ಟ್ರಂಪ್ ಪರವಾಗಿ ಬಂದ ನಂತರ ಅನೇಕರು ದುಃಖಭರಿತರಿಗಾಗಿ ಅಳುತ್ತಿರುವುದು ಕಂಡುಬರುತ್ತದೆ. ಇಂತಹ ವೀಡಿಯೊಗಳ ಸಂಕಲನವು X (ಹಿಂದೆ Twitter) ನಲ್ಲಿ ಭಾರೀ ವೈರಲ್‌ ಆಗಿವೆ.

ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ನಲ್ಲಿ 3 ಮಿಲಿಯನ್ ಅನುಯಾಯಿಗಳನ್ನು ಹೊಂದಿರುವ ಬಲಪಂಥೀಯ ರೇಡಿಯೊ ಶೋ ಹೋಸ್ಟ್ ಅಲೆಕ್ಸ್ ಜೋನ್ಸ್, “ಬೆಸ್ಟ್ ಆಫ್ ಲೆಫ್ಟಿಸ್ಟ್‌, ಟ್ರಂಪ್ ವಿಕ್ಟರಿ ಮೆಲ್ಟ್‌ ಡೌನ್ಸ್” ಎಂಬ ಶೀರ್ಷಿಕೆಯೊಂದಿಗೆ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಸುಮಾರು 34 ಮಿಲಿಯನ್ ಜನರು ವೀಡಿಯೊವನ್ನು ವೀಕ್ಷಿಸಿದ್ದು, ಈಗಲೂ ಇದರ ನಾಗಾಲೋಟ ಮುಂದುವರೆದಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read