ವಿಶ್ವವಿದ್ಯಾನಿಲಯದಲ್ಲಿ ವಾಗ್ವಾದದ ವಾರ್ ; ವಿದ್ಯಾರ್ಥಿನಿಯರ ಹೈ-ಫೈಟ್ ವೈರಲ್ | Watch Video

ಪ್ರತಿಷ್ಠಿತ ವಿಶ್ವವಿದ್ಯಾನಿಲಯದ ಇಬ್ಬರು ವಿದ್ಯಾರ್ಥಿನಿಯರ ನಡುವಿನ ವಾಗ್ವಾದದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ನಗೆಗಡಲಲ್ಲಿ ತೇಲುತ್ತಿದ್ದಾರೆ.

ವಿಡಿಯೋದಲ್ಲಿ, ಇಬ್ಬರು ವಿದ್ಯಾರ್ಥಿನಿಯರು ಪರಸ್ಪರ ಬಾಯಿಗೆ ಬಂದಂತೆ ಬೈದುಕೊಳ್ಳುತ್ತಿದ್ದಾರೆ. ಅವರ ಮಾತುಗಳು ನಂತರ ಹೊಡೆದಾಟಕ್ಕೆ ತಿರುಗಿದವು. ಅವರ ಸಹಪಾಠಿಗಳು ಇದನ್ನು ನೋಡಿ ನಗುತ್ತಾ ಚಪ್ಪಾಳೆ ತಟ್ಟುತ್ತಿದ್ದರು. ಅವರು ಬಳಸಿದ ಪದಗಳ ಶಬ್ದಕೋಶ ಕೇಳಿ ನೆಟ್ಟಿಗರು ಹುಬ್ಬೇರಿಸಿದ್ದಾರೆ.

ಈ ವಿಡಿಯೋ ನೋಡಿದ ನೆಟ್ಟಿಗರು ನಾನಾ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಕೆಲವರು ಇದನ್ನು “ಅತ್ಯಾಧುನಿಕ” ಜಗಳ ಎಂದು ಕರೆದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಗಳಿಗೆ ವಾದ ಮಾಡುವುದು ಹೇಗೆಂದು ಚೆನ್ನಾಗಿ ಗೊತ್ತು ಎಂಬುದಕ್ಕೆ ಇದು ಸಾಕ್ಷಿ ಎಂದು ಕೆಲವರು ತಮಾಷೆ ಮಾಡಿದ್ದಾರೆ.

“ನಿಮ್ಮ ಬೋಧನಾ ಶುಲ್ಕವು ನಿಮ್ಮ ವಾರ್ಷಿಕ ಬಾಡಿಗೆಗಿಂತ ಹೆಚ್ಚಾದಾಗ ನೀವು ಹೀಗೆ ಹೋರಾಡುತ್ತೀರಿ” ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. “ಹುಡುಗರು ಮಾತ್ರ ಏಕೆ ಮೋಜು ಮಾಡಬೇಕು? ಬೌದ್ಧಿಕ ಯುದ್ಧಗಳು ಪ್ರಾರಂಭವಾಗಲಿ !” ಎಂದು ಇನ್ನೊಬ್ಬರು ಚಟಾಕಿ ಹಾರಿಸಿದ್ದಾರೆ. ಒಟ್ಟಿನಲ್ಲಿ, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read