ಉತ್ತರ ಪ್ರದೇಶದ ಗಾಜಿಯಾಬಾದ್‌ನ ಜನನಿಬಿಡ ಸ್ಥಳದಲ್ಲಿ ಮೂವರು ಮಹಿಳೆಯರ ಕಿತ್ತಾಡಿಕೊಂಡ ವಿಡಿಯೋ ವೈರಲ್ ಆಗಿದೆ. ಮಹಿಳೆಯೊಬ್ಬಳ ಜಡೆ ಹಿಡಿದು ಇನ್ನೊಬ್ಬ ಮಹಿಳೆ ಎಳೆಯುತ್ತಿದ್ದಾಳೆ. ಮೂರನೇಯವಳು ಇವರನ್ನು ಬಿಡಿಸುವ ಪ್ರಯತ್ನ ನಡೆಸುತ್ತಿದ್ದಂತೆ ಕಾಣುತ್ತಿದೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಇದ್ರ ವಿಡಿಯೋ ಹಂಚಿಕೊಳ್ಳಲಾಗಿದೆ. ಯುಪಿಯ ಗಾಜಿಯಾಬಾದ್ ಕಾಳೇಶ್ ಬಿ/ಡಬ್ಲ್ಯೂವಿನಲ್ಲಿ ಮೂವರು ಹೆಂಗಸರು ರಸ್ತೆಯಲ್ಲಿ ಜನಸಂದಣಿ ಪ್ರದೇಶದಲ್ಲಿ ವಹಿವಾಟಿಗೆ ಸಂಬಂಧಿಸಿದಂತೆ ಕಿತ್ತಾಡುತ್ತಿದ್ದಾರೆ ಎಂದು ಶೀರ್ಷಿಕೆ ಹಾಕಲಾಗಿದೆ. ಅವರು ವಹಿವಾಟಿನ ವಿಷ್ಯಕ್ಕೆ ಜಗಳ ಮಾಡ್ತಿದ್ದಾರೆ ಎಂಬುದು ಇದ್ರಿಂದ ಸ್ಪಷ್ಟವಾಗುತ್ತದೆ.
ವಿಡಿಯೋದ ಕೊನೆಯಲ್ಲಿ ಜಗಳ ಬಿಡಿಸಲು ಅನೇಕರು ಪ್ರಯತ್ನ ನಡೆಸ್ತಾರೆ. ಆದ್ರೆ ಅವರ ಮೇಲೆಯೇ ಹಲ್ಲೆ ನಡೆಯುತ್ತದೆ. ಕೊನೆಯಲ್ಲಿ ಕೂದಲು ಎಳೆಸಿಕೊಂಡ ಮಹಿಳೆ ನೋವು ತಾಳಲಾರದೆ ಕೆಳಗೆ ಬೀಳ್ತಾಳೆ. ಎಕ್ಸ್ ಖಾತೆಯಲ್ಲಿ ಈ ವಿಡಿಯೋ ನೋಡಿದ ಬಳಕೆದಾರರು ಆಘಾತಗೊಂಡಿದ್ದಾರೆ. ಉತ್ತರ ಪ್ರದೇಶದಲ್ಲಿ ವುಮೆನ್ ಪವರ್ ಸ್ವಲ್ಪ ಹೆಚ್ಚೇ ಆಗಿದೆ ಎಂದು ಬಳಕೆದಾರರು ಕಮೆಂಟ್ ಮಾಡಿದ್ದಾರೆ.
Kalesh b/w Three Ladies in Crowd on Road over There was a dispute regarding the transaction, Ghaziabad UP
pic.twitter.com/2ujJAM4NMq— Ghar Ke Kalesh (@gharkekalesh) July 23, 2024