ಶ್ರೀಲಂಕಾದ ಸಫಾರಿ ವೇಳೆ ಆನೆಯೊಂದು ಜೀಪಿನ ಮೇಲೆ ದಾಳಿ ಮಾಡಲು ಬಂದಾಗ ನಾಟಕೀಯ ತಿರುವು ಪಡೆದಿದ್ದು, ಆದರೆ ಸಫಾರಿ ಗೈಡ್ ಸಮಯಪ್ರಜ್ಞೆ ಸಂಭಾವ್ಯ ದುರಂತವನ್ನು ತಪ್ಪಿಸಿದೆ. ಇಮಾಲ್ ನನಯಕ್ಕರ ಹಂಚಿಕೊಂಡ ವೈರಲ್ ವಿಡಿಯೋದಲ್ಲಿ, ಸಫಾರಿ ಜೀಪ್ ಹೋಗುತ್ತಿದ್ದಾಗ ಎರಡು ಆನೆಗಳು ರಸ್ತೆಯಲ್ಲಿದ್ದು, ಇದ್ದಕ್ಕಿದ್ದಂತೆ, ಒಂದು ಆನೆ ಜೀಪ್‌ನತ್ತ ಧಾವಿಸಿದೆ.
ತಕ್ಷಣವೇ ಕಾರ್ಯಪ್ರವೃತ್ತರಾದ ಗೈಡ್, ಜೀಪ್‌ನಿಂದ ಹೊರಗೆ ಜಿಗಿದು ಬಾನೆಟ್ ಮೇಲೆ ಬಡಿಯಲು ಪ್ರಾರಂಭಿಸಿದ್ದು, ನಂತರ ಆನೆಗೆ “ನಿಲ್ಲಿಸು” ಎಂಬ ಕೈ ಸನ್ನೆ ತೋರಿಸಿದ್ದಾರೆ. ಆಶ್ಚರ್ಯಕರವಾಗಿ, ಆನೆಯು ಗೈಡ್ ಕಾರ್ಯಕ್ಕೆ ಸ್ಪಂದಿಸಿ ಹಿಂತಿರುಗಿದ್ದರಿಂದ, ಉದ್ವಿಗ್ನ ಪರಿಸ್ಥಿತಿ ತಿಳಿಯಾಗಿದೆ.