ಕುಂಭಮೇಳಕ್ಕೆ ತೆರಳುತ್ತಿದ್ದವರಿಂದ ರೈಲು ವ್ಯಾಪಾರಿಗೆ ಕಿರುಕುಳ; ಶಾಕಿಂಗ್ ವಿಡಿಯೋ ವೈರಲ್ | Watch

ಪ್ರಯಾಗ್‌ರಾಜ್‌ನಲ್ಲಿ ನಡೆಯುವ ಮಹಾ ಕುಂಭಮೇಳಕ್ಕೆ ತೆರಳುವ ರೈಲಿನಲ್ಲಿ ಪ್ರಯಾಣಿಕರ ಗುಂಪೊಂದು ವ್ಯಾಪಾರಿಯೊಬ್ಬರಿಗೆ ಕಿರುಕುಳ ನೀಡುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ವಿಡಿಯೊದಲ್ಲಿ ಕಾಣುವಂತೆ, ರೈಲಿನಲ್ಲಿ ಮೊಳಕೆ ಕಾಳುಗಳನ್ನು ಮಾರುತ್ತಿದ್ದ ವ್ಯಾಪಾರಿಯೊಬ್ಬರು ಜನಸಂದಣಿಯಲ್ಲಿ ಹೋಗಲು ಹೆಣಗಾಡುತ್ತಿರುವುದು ಕಂಡುಬಂದಿದೆ. ಅನೇಕರು ಅವರು ಮಾರುತ್ತಿದ್ದ ಮೊಳಕೆ ಕಾಳುಗಳನ್ನು ಹಣ ನೀಡದೆ ಕಸಿದುಕೊಳ್ಳುತ್ತಿದ್ದರು.

ವಿಡಿಯೊದಲ್ಲಿ ನೋಡಿದಂತೆ, ಇತರರು ನಗುತ್ತಿರುವುದು ಕಂಡುಬಂದಿದೆ. ರೈಲು ಪ್ರಯಾಗ್‌ರಾಜ್‌ಗೆ ಪ್ರಯಾಣಿಸುತ್ತಿತ್ತೇ ಎಂಬುದು ಖಚಿತವಾಗದಿದ್ದರೂ, ರೈಲಿನಲ್ಲಿದ್ದ ಪ್ರಯಾಣಿಕರೊಬ್ಬರು “ಮಹಾ ಕುಂಭ” ಎಂದು ಹೇಳುತ್ತಿರುವುದು ಕೇಳಿಬಂದಿದೆ.

ವ್ಯಾಪಾರಿ ಪ್ರಯಾಣಿಕರಿಗೆ ಕೋಪದಿಂದ ಪ್ರತಿಕ್ರಿಯಿಸುತ್ತಿರುವುದು ಕಂಡುಬಂದಿದೆ. ಈ ವಿಡಿಯೊ ಏಳು ಲಕ್ಷಕ್ಕೂ ಹೆಚ್ಚು ಎಕ್ಸ್ ಬಳಕೆದಾರರ ಗಮನ ಸೆಳೆದಿದ್ದು, ಕೆಲವರು ಪ್ರಯಾಣಿಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

“ಪ್ರಾಮಾಣಿಕವಾಗಿ ಕಷ್ಟಪಟ್ಟು ದುಡಿಯುವ ವ್ಯಕ್ತಿಯನ್ನು ನಿರ್ಲಜ್ಜ ಜನರು ಲೂಟಿ ಮಾಡುತ್ತಿದ್ದಾರೆ” ಎಂದು ಎಕ್ಸ್ ಬಳಕೆದಾರರೊಬ್ಬರು ಬರೆದಿದ್ದಾರೆ.

“ಕದ್ದು ನಗುವ ಈ ಜನರು ಗಂಗೆಯಲ್ಲಿ ಮುಳುಗಿದರೆ ತಮ್ಮ ಪಾಪಗಳು ಕಳೆಯುತ್ತವೆ ಎಂದು ಭಾವಿಸುತ್ತಾರೆಯೇ?” ಎಂದು ಮತ್ತೊಬ್ಬರು ಬರೆದಿದ್ದಾರೆ.

“ನಾವು ಪರಸ್ಪರ ಗೌರವಿಸದಿದ್ದಾಗ ನಾವು ದೇಶವಾಗಿ ಹೇಗೆ ಬೆಳೆಯಲು ಸಾಧ್ಯ?” ಎಂದು ಎಕ್ಸ್ ಬಳಕೆದಾರರೊಬ್ಬರು ಕೇಳಿದ್ದಾರೆ.

“ಹಾಗಾದರೆ ಅವರು ತಮ್ಮ ಪಾಪಗಳನ್ನು ತೊಳೆಯಲು ಮಹಾ ಕುಂಭಕ್ಕೆ ಹೋಗುತ್ತಿದ್ದಾರೆಯೇ?” ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ.

ಪ್ರಯಾಗ್‌ರಾಜ್‌ಗೆ ಮಹಾ ಕುಂಭಕ್ಕೆ ತೆರಳುವ ರೈಲುಗಳಲ್ಲಿ ಅಸಾಮಾನ್ಯವಾದ ಜನಸಂದಣಿ ಕಂಡುಬಂದಿದೆ. ಬೀಗ ಹಾಕಿದ ಬಾಗಿಲುಗಳಿಂದಾಗಿ ಹತ್ತಲು ಸಾಧ್ಯವಾಗದ ಅನೇಕ ಪ್ರಯಾಣಿಕರು ನಿಂತಿರುವ ರೈಲುಗಳ ಬಾಗಿಲು ಮತ್ತು ಕಿಟಕಿಗಳನ್ನು ಧ್ವಂಸಗೊಳಿಸಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read