ವಧುವಿನ ಮುಂದೆ ವರನ ರೊಮ್ಯಾಂಟಿಕ್​ ಹಾಡು: ನೆಟ್ಟಿಗರು ಫಿದಾ

ಮದುವೆಯ ದಿನದಂದು ವರನು ವಧುವಿನ ಮುಂದೆಯೇ ಕುಳಿತು ಅಲ್ಲಿ ಹಾಜರಿರುವ ಎಲ್ಲಾ ಅತಿಥಿಗಳ ಮುಂದೆ ಪ್ರಣಯ ಹಾಡನ್ನು ಹಾಡಿದರೆ ಎಷ್ಟು ರೊಮ್ಯಾಂಟಿಕ್ ಆಗಿರುತ್ತದೆ ಅಲ್ಲವೆ ? ಅಂಥದ್ದೇ ಒಂದು ರೊಮ್ಯಾಂಟಿಕ್​ ವಿಡಿಯೋ ವೈರಲ್​ ಆಗಿದೆ. ವರ ಸಾಮಿ ರಶೀದ್ ಮದುವೆಯ ದಿನ ಭಾವಿ ಪತ್ನಿಯ ಮುಂದೆ ಕುಳಿತು ಆಕೆಗಾಗಿ ಹಾಡಿದ್ದು ವೈರಲ್​ ಆಗಿದೆ. ವಿಡಿಯೋದಲ್ಲಿರುವ ದಂಪತಿ ಪಾಕಿಸ್ತಾನದವರು.

ಈ ವಿಡಿಯೋ 2 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಹೊಂದಿದೆ. ಈಗ ವೈರಲ್ ಆಗಿರುವ ವಿಡಿಯೋದಲ್ಲಿ, ವರನು ತನ್ನ ಮದುವೆಯ ಧಿರಿಸನ್ನು ಧರಿಸಿ ಗಿಟಾರ್‌ನೊಂದಿಗೆ ಕುರ್ಚಿಯ ಮೇಲೆ ಕುಳಿತಿರುವುದನ್ನು ಕಾಣಬಹುದು. ಅವನ ವಧು ಮುಂದೆ ಕುಳಿತಿರುತ್ತಾಳೆ.

ನಂತರ ವರ ಆಮೀರ್ ಖಾನ್ ಮತ್ತು ಕಾಜೋಲ್ ಅಭಿನಯದ ಫನಾ ಚಿತ್ರದ ಚಾಂದ್ ಸಿಫಾರಿಶ್ ಹಾಡನ್ನು ಹಾಡಿದ್ದಾನೆ. ಅಲ್ಲಿರುವ ಜನರು ಹುರಿದುಂಬಿಸುತ್ತಿದ್ದಾರೆ. ವಧು ನಾಚಿ ನೀರಾಗಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಈ ವಿಡಿಯೋಗೆ ಸಹಸ್ರಾರು ಮಂದಿ ಸಂತಸ ವ್ಯಕ್ತಪಡಿಸಿದ್ದಾರೆ.

https://www.youtube.com/watch?v=L0b5_WGcMHc

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read