ಕ್ರೀಡಾ ಕಾರ್ಯಕ್ರಮ ಉದ್ಘಾಟನೆಯಲ್ಲಿ ಭಾಗವಹಿಸಿದ್ದ ಒಡಿಶಾದ ನಾರ್ಲಾ ಕ್ಷೇತ್ರದ ಶಾಸಕ ಭೂಪೇಂದ್ರ ಸಿಂಗ್ ಕ್ರಿಕೆಟ್ ಆಡುವಾಗ ಬಿದ್ದು ಗಾಯಗೊಂಡಿದ್ದಾರೆ. ಬ್ಯಾಟಿಂಗ್ ಮಾಡಲು ಸಿದ್ಧವಾಗಿದ್ದ ಅವರು ಚೆಂಡನ್ನು ಎದುರಿಸಲು ಮುಂದಾದರು. ಬೌಲರ್ ಸ್ಲೋ ಶಾರ್ಟ್ ಬಾಲ್ ಎಸೆದ ತಕ್ಷಣ ಎಂ ಎಲ್ ಎ ಸರಿಯಾಗಿ ಪುಲ್ ಶಾಟ್ ಆಡಲು ಯತ್ನಿಸಿದರು.
ಆದರೆ ಈ ವೇಳೆ ಅನಿರೀಕ್ಷಿತ ಘಟನೆ ನಡೆದೋಯ್ತು. ಚೆಂಡು ಎದುರಿಸುವ ವೇಳೆ ಸಮತೋಲನದ ಕಳೆದುಕೊಂಡ ಶಾಸಕರು ಮುಗ್ಗರಿಸಿ ಮೈದಾನದಲ್ಲಿ ಬಿದ್ದುಬಿಟ್ಟರು. ಈ ವೇಳೆ ಶಾಸಕರ ಕ್ರಿಕೆಟ್ ನೋಡಲು ಕುತೂಹಲದಿಂದ ನಿಂತಿದ್ದ ಹಲವರು ಶಾಸಕನ ನೆರವಿಗೆ ಬಂದರು.
ತೀವ್ರವಾಗಿ ಬಿದ್ದ ನಂತರ ಉಂಟಾದ ಗಾಯಗಳಿಂದಾಗಿ ಶಾಸಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇಡೀ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ರಾಜಕಾರಣಿಗಳು ಕ್ರಿಕೆಟ್ ಪಿಚ್‌ನಲ್ಲಿ ತಮ್ಮ ಕೈಚಳಕ ತೋರಿಸಲು ಪ್ರಯತ್ನಿಸುವುದಕ್ಕಿಂತ ರಾಜಕೀಯ ಪಿಚ್‌ನಲ್ಲಿ ತಮ್ಮನ್ನು ತಾವು ನಿರ್ಬಂಧಿಸಿಕೊಳ್ಳುವಂತೆ ಕೆಲವರು ಸಲಹೆ ನೀಡಿದ್ದಾರೆ.
https://twitter.com/gyanu999/status/1740607465732051092?ref_src=twsrc%5Etfw%7Ctwcamp%5Etweetembed%7Ctwterm%5E1740607465732051092%7Ctwgr%5E28c4f2858ba1bb41dc858d06bbb73f8fd1676ab6%7Ctwcon%5Es1_&ref_url=https%3A%2F%2Fwww.freepressjournal.in%2Findia%2Fviral-video-shows-odisha-mla-bhupendra-singh-falling-flat-on-his-face-on-cricket-pitch-while-batting-hospitalised