ಸುತ್ತಿಗೆಯಿಂದ ʼವಂದೇ ಭಾರತ್ ಎಕ್ಸ್ ಪ್ರೆಸ್ʼ ರೈಲು ಕಿಟಕಿ ಒಡೆದ ಯುವಕ; ಶಾಕಿಂಗ್ ವಿಡಿಯೋ ವೈರಲ್

ವಂದೇ ಭಾರತ್ ಎಕ್ಸ್ ಪ್ರೆಸ್‌ನ ಕಿಟಕಿಯನ್ನು ಯವಕನೊಬ್ಬ ಸುತ್ತಿಗೆಯಿಂದ ಒಡೆದು ಹಾಕುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಎಕ್ಸ್ ಬಳಕೆದಾರರೊಬ್ಬರು ಹಂಚಿಕೊಂಡ ವಿಡಿಯೋದಲ್ಲಿ ನಿಂತಿದ್ದ ವಂದೇ ಭಾರತ್ ಎಕ್ಸ್ ಪ್ರೆಸ್‌ನ ಕಿಟಕಿಯನ್ನು ಪದೇ ಪದೇ ಸುತ್ತಿಗೆಯಿಂದ ಒಡೆದುಹಾಕಿದ್ದಾನೆ. “ವಂದೇ ಭಾರತ್ ರೈಲನ್ನು ಸುತ್ತಿಗೆಯಿಂದ ಧ್ವಂಸಗೊಳಿಸಿದ ನಿಗೂಢ ವ್ಯಕ್ತಿ. ಇದು ಎಲ್ಲಿ ನಡೆಯಿತು ಮತ್ತು ಘಟನೆ ಏನು ಎಂದು ಯಾರಿಗಾದರೂ ತಿಳಿದಿದೆಯೇ?’ ಎಂದು ವಿಡಿಯೋ ಹಂಚಿಕೊಳ್ಳಲಾಗಿದೆ.

ಈ ಘಟನೆ ನಡೆದ ಸ್ಥಳ ಮತ್ತು ಸಮಯ ತಿಳಿದು ಬಂದಿಲ್ಲ. ಆದರೆ ಯುವಕನ ಕೃತ್ಯ ಆನ್‌ಲೈನ್‌ನಲ್ಲಿ ವ್ಯಾಪಕ ಆಕ್ರೋಶವನ್ನು ಹುಟ್ಟುಹಾಕಿದೆ. ಅನೇಕ ಬಳಕೆದಾರರು ಆತನ ಬಂಧನಕ್ಕೆ ಆಗ್ರಹಿಸಿದ್ದಾರೆ. ಆತನಿಗೆ ಅತ್ಯಂತ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದರೆ ಇತರರು ಈತನಿಗೆ ಮರಣದಂಡನೆ ನೀಡಬೇಕೆಂದು ಹೇಳಿದ್ದಾರೆ.

ವೈರಲ್ ವಿಡಿಯೋಗೆ ಪ್ರತಿಕ್ರಿಯಿಸಿರುವ ಓರ್ವ ಎಕ್ಸ್ ಬಳಕೆದಾರರು , ಆ ವ್ಯಕ್ತಿ, ಒಡೆದ ಕಿಟಕಿಯನ್ನು ಬದಲಿಸುವ ಗುತ್ತಿಗೆದಾರ ಎಂದು ಹೇಳಿದ್ದಾರೆ. ರೈಲು ಪ್ಲಾಟ್‌ಫಾರ್ಮ್‌ನಲ್ಲಲ್ಲ, ಸೇವಾ ಕೇಂದ್ರದಲ್ಲಿದೆ. ಅವರು ಗಾಜಿನ ಕಿಟಕಿಯನ್ನು ಬದಲಿಸಲು ನಿಯೋಜಿಸಲಾದ ಕೆಲಸಗಾರರಾಗಿದ್ದಾರೆ ಎಂದು ತಿಳಿಸಿದ್ದಾರೆ.

ವೀಡಿಯೊದ ಅಸಲಿ ವಿವರಗಳನ್ನು ಅಧಿಕಾರಿಗಳು ಇನ್ನೂ ಖಚಿತಪಡಿಸಿಲ್ಲ, ಆದರೆ ಈ ಘಟನೆಯು ಸಾರ್ವಜನಿಕ ಆಸ್ತಿಯ ಸುರಕ್ಷತೆಯ ಹೊಣೆಗಾರಿಕೆಯ ಬಗ್ಗೆ ಕಳವಳವನ್ನು ಉಂಟುಮಾಡಿದೆ.

https://twitter.com/GanKanchi/status/1833369116725703030?ref_src=twsrc%5Etfw%7Ctwcamp%5Etweetembed%7Ctwterm%5E1833369116725703030%7Ctwgr%5E54b6cedab34cab873595b287a41b88ceccbfdc1c%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fenglish%2Fjagranenglish

https://twitter.com/mystyx_7/status/1833407696680190268?ref_src=twsrc%5Etfw%7Ctwcamp%5Etweetembed%7Ctwterm%5E1833407696680190268%7Ctwgr%5E54b6cedab34cab873595b287a41b88c

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read