ಜೈಲಿನೊಳಗೆ ವಿಚಾರಣಾಧೀನ ಕೈದಿಗಳ ಬರ್ತಡೇ ಪಾರ್ಟಿ; ವಿಡಿಯೋ ವೈರಲ್

ವಿಚಾರಣಾಧೀನ ಕೈದಿಗಳು ಮತ್ತು ದರೋಡೆಕೋರರು ಜೈಲಿನಲ್ಲಿ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿರುವ ಘಟನೆ ಪಂಜಾಬ್ ನಲ್ಲಿ ನಡೆದಿದೆ. ಲೂಧಿಯಾನಾದ ಸೆಂಟ್ರಲ್ ಜೈಲಿನಲ್ಲಿ ಕೈದಿಗಳು ಹುಟ್ಟುಹಬ್ಬ ಆಚರಿಸಿದ್ದು ಅವರ ಸಂಭ್ರಮಾಚರಣೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಚರ್ಚೆಗೆ ಎಡೆಮಾಡಿಕೊಟ್ಟಿದೆ. ಕೈದಿಗಳು ಇದೇ ಜೈಲಿನಲ್ಲಿರುವ ಗ್ಯಾಂಗ್‌ಸ್ಟರ್ ಮಣಿ ರಾಣಾ ಅವರ ಜನ್ಮದಿನವನ್ನು ಆಚರಿಸುತ್ತಿರುವ ವಿಡಿಯೋ ಇದಾಗಿದೆ. ವಿಡಿಯೋ 15 ದಿನಗಳ ಹಿಂದಿನದ್ದಾಗಿದ್ದು ಬರ್ತ್ ಡೇ ಪಾರ್ಟಿಯನ್ನು ಡಿಸೆಂಬರ್ 2023 ರಲ್ಲಿ ನಡೆಸಲಾಗಿದೆ.

ವಿಡಿಯೋ ವೈರಲ್ ಆದ ಬಳಿಕ ನೆಟ್ಟಿಗರು ಅಚ್ಚರಿಯ ಜೊತೆಗೆ ಪದೇ ಪದೇ ಜೈಲಿನೊಳಗೆ ಇಂತಹ ಆಚರಣೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜೈಲು ಅಧಿಕಾರಿಗಳು ವೀಡಿಯೊದಲ್ಲಿ ಕಂಡುಬಂದ ಕೈದಿಗಳ ವಿರುದ್ಧ ಪ್ರಕರಣವನ್ನು ದಾಖಲಿಸಿದ್ದಾರೆ.

ಕೈದಿಗಳು ಜೈಲಿನೊಳಗೆ ಪಕೋಡ, ಚಹಾ ಮುಂದಿಟ್ಟುಕೊಂಡು ಪಾರ್ಟಿ ಮಾಡಿದ್ದಾರೆ. ತಮ್ಮ ಮೊಬೈಲ್ ನಲ್ಲಿ ವಿಡಿಯೋ ಚಿತ್ರೀಕರಣ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡಿದ್ದಾರೆ.

ಪಂಜಾಬ್ ಜೈಲುಗಳು ಈ ಕಾರಣಕ್ಕಾಗಿ ಸುದ್ದಿಯಾಗುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಕೂಡ ಜೈಲಿನೊಳಗೆ ನಡೆದ ಹುಟ್ಟುಹಬ್ಬದ ಪಾರ್ಟಿಗಳ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜೈಲು ಅಧಿಕಾರಿಗಳಿಗೆ ಮುಜುಗರ ಉಂಟು ಮಾಡಿತ್ತು.

https://twitter.com/NikhilCh_/status/1742812199914246320?ref_src=twsrc%5Etfw%7Ctwcamp%5Etweetembed%7Ctwterm%5E1742812199914246320%7Ctwgr%5E4a3248c445e8b62ce5c32ce202734249ed27baee%7Ctwcon%5Es1_&ref_url=https%3A%2F%2Fwww.freepressjournal.in%2Findia%2Fviral-video-shows-inmates-of-ludhiana-central-jail-celebrating-gangster-mani-ranas-birthday

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read