Video: ‘ಪಾಕ್’ ನಲ್ಲಿ ಮತ್ತೊಂದು ಅಮಾನವೀಯ ಘಟನೆ; ರಸ್ತೆಯಲ್ಲಿ ಹೋಗುತ್ತಿದ್ದ ಯುವತಿಗೆ ಹಾಡಹಗಲೇ ‘ಕಿರುಕುಳ’

ನೆರೆರಾಷ್ಟ್ರ ಪಾಕಿಸ್ತಾನ ತೀವ್ರ ಆರ್ಥಿಕ ಸಂಕಷ್ಟದಿಂದ ಕಂಗೆಟ್ಟು ಹೋಗಿದ್ದು, ಅಲ್ಲಿನ ಜನ ಒಂದೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿ ಎದುರಾಗಿದೆ. ಇದರ ಮಧ್ಯೆಯೂ ಮಹಿಳೆಯರು, ಯುವತಿಯರಿಗೆ ಹಾಡಹಗಲೇ ಕಿರುಕುಳ ನೀಡುತ್ತಿರುವ ಘಟನೆ ನಡೆಯುತ್ತಿದ್ದು, ಇದರ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಇತ್ತೀಚೆಗಷ್ಟೇ ನೂರಾರು ಮಂದಿ ಇದ್ದ ಗುಂಪು ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಆಗಿರುವ ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದು, ಅಸಹಾಯಕಳಾಗಿದ್ದ ಆಕೆಯ ವಿಡಿಯೋ ವೈರಲ್ ಆಗಿತ್ತು. ಇದೀಗ ಮತ್ತೊಂದು ಅಂತಹುದೇ ಘಟನೆ ನಡೆದಿದ್ದು ಯುವಕನ ಜೊತೆ ಯುವತಿಯೊಬ್ಬಳು ಹೋಗುತ್ತಿದ್ದಾಗ ಆಕೆಯನ್ನು ಹಿಂಬಾಲಿಸಿ ಕಿರುಕುಳ ನೀಡಲಾಗಿದೆ.

ಪಾಕಿಸ್ತಾನದ ಇಸ್ಲಾಮಾಬಾದ್ ನಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದ್ದು ಪ್ಯಾಂಟ್ – ಟಿ ಶರ್ಟ್ ಧರಿಸಿದ್ದ ಯುವತಿ, ಯುವಕನ ಜೊತೆ ನಡೆದು ಹೋಗುತ್ತಿರುತ್ತಾಳೆ. ಆಗ ಚಿಕ್ಕವರಿಂದ ಹಿಡಿದು ದೊಡ್ಡವರವರೆಗೆ ಇದ್ದ ಪುರುಷರ ಗುಂಪು ಆಕೆಯನ್ನು ಹಿಂಬಾಲಿಸಿ ಕಿರುಕುಳ ನೀಡಲು ಆರಂಭಿಸಿದೆ. ಆಕೆ ಪ್ರತಿರೋಧ ತೋರಲು ಯತ್ನಿಸಿದ್ದು, ಜೊತೆಗಿದ್ದ ಯುವಕ ಗೆಳತಿಗೆ ಕಿರುಕುಳ ನೀಡದಂತೆ ಬೇಡಿಕೊಂಡರೂ ಕೃತ್ಯ ಮುಂದುವರಿಸಿದ್ದಾರೆ. ಆಘಾತಕಾರಿ ಸಂಗತಿ ಎಂದರೆ ಯುವತಿಗೆ ಕಿರುಕುಳ ನೀಡುತ್ತಿದ್ದ ಗುಂಪಿನಲ್ಲಿ ಇದ್ದ ಯುವಕನೊಬ್ಬ ಈ ಹಿಂದೆ ತೃತೀಯ ಲಿಂಗಿಗೆ ಇದೇ ರೀತಿ ಮಾಡಿದ್ದ ಎನ್ನಲಾಗಿದ್ದು, ಆ ವಿಡಿಯೋವನ್ನು ಸಹ ಶೇರ್ ಮಾಡಲಾಗಿದೆ.

https://twitter.com/Yogurtbeaches/status/1824189103971373100?ref_src=twsrc%5Etfw%7Ctwcamp%5Etweetembed%7Ctwterm%5E1824189103971373100%7Ctwgr%5Ef73b1ec03060b63c8c5953c5c333ffb3b7029592%7

https://twitter.com/Yogurtbeaches/status/1824319683987722697?ref_src=twsrc%5Etfw%7Ctwcamp%5Etweetembed%7Ctwterm%5E1824319683987722697%7Ctwgr%5Ef73b

https://twitter.com/Yogurtbeaches/status/1824189103971373100?ref_src=twsrc%5Etfw%7Ctwcamp%5Etweetembed%7Ctwterm%5E1824450959428162001%7Ctwgr%5Ef73b1ec03060b63c8

https://twitter.com/Yogurtbeaches/status/1824387227356459077?ref_src=twsrc%5Etfw%7Ctwcamp%5Etweetembed%7Ctwterm%5E1824387227356459077%7Ctwgr%5Ef73b1ec03060b

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read