ಥೈಲ್ಯಾಂಡ್ ನಲ್ಲಿ ರೈಲು ಹಳಿಯ ಪಕ್ಕದಲ್ಲೇ ಮಾರ್ಕೆಟ್ ಇದ್ದು ವ್ಯಾಪಾರದ ಸ್ಥಳವಾಗಿದೆ. ಸಮುತ್ ಸಾಂಗ್‌ಖ್ರಾಮ್ ಪ್ರಾಂತ್ಯದಲ್ಲಿರುವ ಥೈಲ್ಯಾಂಡ್‌ನ ಮೇಕ್ಲಾಂಗ್ ರೈಲು ನಿಲ್ದಾಣವು ಪ್ರವಾಸಿ ಆಕರ್ಷಣೆಯಾಗಿದೆ. ನಿಲ್ದಾಣವು ರೋಮ್ ಹಪ್ ಮಾರುಕಟ್ಟೆಯನ್ನು ಹೊಂದಿದ್ದು ಅದು ಅಕ್ಷರಶಃ ರೈಲ್ವೇ ಹಳಿಯಲ್ಲಿದೆ.
ಥೈಲ್ಯಾಂಡ್ ಪ್ರವಾಸೋದ್ಯಮದ ವೆಬ್‌ಸೈಟ್ ಪ್ರಕಾರ ಮಾರುಕಟ್ಟೆಯು 100 ಮೀಟರ್ ವಿಸ್ತಾರದಲ್ಲಿ ಹರಡಿಕೊಂಡಿದೆ. ಬೆಳಿಗ್ಗೆ 6 ರಿಂದ ಸಂಜೆ 6 ರವರೆಗೆ ತೆರೆದಿರುತ್ತದೆ. ಇದು ಸಮುದ್ರಾಹಾರ, ತರಕಾರಿ, ಹಣ್ಣುಗಳು, ತಾಜಾ ಮತ್ತು ಒಣಗಿದ ಆಹಾರ, ಮಾಂಸ ಮತ್ತು ಇತರ ವಿವಿಧ ಆಹಾರ ಪದಾರ್ಥಗಳನ್ನು ಮಾರಾಟ ಮಾಡುವ ಸಾಮಾನ್ಯ ತಾಜಾ ಮಾರುಕಟ್ಟೆಯಾಗಿದೆ. ಮಾರುಕಟ್ಟೆಯನ್ನು ‘ಜೀವ-ಅಪಾಯಕಾರಿ’ ಮಾರುಕಟ್ಟೆ ಎಂದು ಕರೆಯಲಾಗುತ್ತದೆ.
ಏಕೆಂದರೆ ಅದರ ಮಳಿಗೆಗಳು ಮೇ ಕ್ಲೋಂಗ್-ಬಾನ್ ಲೇಮ್ ರೈಲ್ವೆ ಹಳಿ ಪಕ್ಕದಲ್ಲೇ ಇದೆ. ಇದು ಮಹಾಚಾಯ್ ಮತ್ತು ಮೇ ಕ್ಲೋಂಗ್‌ಗೆ ಚಲಿಸುವ ಸಣ್ಣ ರೈಲು ಮಾರ್ಗವಾಗಿದೆ.
https://twitter.com/ErikSolheim/status/1617418227558109185?ref_src=twsrc%5Etfw%7Ctwcamp%5Etweetembed%7Ctwterm%5E1617418227558109185%7Ctwgr%5E44c6e1100b29858d0b649ce3fbe844f04116d2de%7Ctwcon%5Es1_&ref_url=https%3A%2F%2Fwww.ndtv.com%2Foffbeat%2Fviral-video-shows-a-food-market-set-on-railway-tracks-in-thailand-3721705