ಸಖತ್‌ ಕ್ಯೂಟ್‌ ಆಗಿದೆ ಮೊಟ್ಟೆ ಕಾಪಾಡಿಕೊಳ್ಳುತ್ತಿದ್ದ ಕೋಳಿ – ನಾಯಿ ಮರಿ ವಿಡಿಯೋ

ಯಾವುದೇ ಪ್ರಾಣಿ ಇರಲಿ, ಪುಟಾಣಿ ಜೀವಗಳಲ್ಲಿನ ಮುಗ್ಧತೆಯೇ ಅಂಥದ್ದು. ಮುದ್ದಾದ ನಾಯಿ ಮರಿಯೊಂದು ಕೋಳಿಯೊಂದರ ಹಿಂದೆ ಓಡಿ ಹೋಗುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ.

ತನ್ನ ಮೊಟ್ಟೆಗಳನ್ನು ಕಾಪಾಡಿಕೊಳ್ಳುತ್ತಿರುವ ಕೋಳಿಯ ಬಳಿ ಹೋಗುವ ಈ ಪುಟಾಣಿ ನಾಯಿ ಮರಿ, ಕೋಳಿಯನ್ನು ಅಪ್ಪಿಕೊಳ್ಳಲು ನೋಡುತ್ತದೆ.

ಅಂತರ್ಜಾಲದಲ್ಲಿ ಸಾಕಷ್ಟು ಶೇರ್‌ ಆಗಿರುವ ಈ ವಿಡಿಯೋ ತುಣುಕು ಪ್ರಾಣಿ ಪ್ರಿಯರ ಮನಗೆದ್ದಿದೆ.

ಕೋಳಿಯೊಂದಿಗೆ ಭಾರೀ ಸಲುಗೆ ಬೆಳೆಸಿಕೊಂಡಂತೆ ಕಾಣುವ ಈ ಮುದ್ದುಮರಿ, ಅದರ ರೆಕ್ಕೆಯೊಳಗೆ ತೂರಿಕೊಂಡು ಆಟವಾಡುವುದನ್ನು ನೋಡಿದ ನೆಟ್ಟಿಗರು ’ಚೋ ಚ್ವೀಟ್’ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

https://twitter.com/GulvindarS/status/1646062093970317313?ref_src=twsrc%5Etfw%7Ctwcamp%5Etweetembed%7Ctwterm

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read